ಮಧುಮೇಹದಿಂದ ಬಳಲುತ್ತಿದ್ದ ಮಹಿಳೆ ಸಾವು

ಕಾರ್ಕಳ : ಮಧುಮೇಹ ಮತ್ತು ಜ್ವರದಿಂದ ಬಳಲುತಿದ್ದ ಮಹಿಳೆಯೋರ್ವರು ಸಾವನಪ್ಪಿದ ಘಟನೆ ಜೂ. 30ರಂದು ಮಿಯ್ಯಾರು ಗ್ರಾಮದಲ್ಲಿ ಸಂಭವಿಸಿದೆ. ಮಲ್ಲಿಕಾ ಲೋಬೊ (43) ಮೃತ ದುರ್ದೈವಿ. ಮಧುಮೇಹ ಹಾಗೂ ಜ್ವರದಿಂದ ಬಳಲುತ್ತಿದ್ದ ಅವರು ಸೋಮವಾರ ಮನೆಯಲ್ಲಿ ಮಲಗಿದ್ದು, ಮಾತನಾಡದೆ ಇದ್ದಾಗ ಕೂಡಲೇ ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮಲ್ಲಿಕಾ ಲೋಬೋ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top