ಮುಂಡ್ಕೂರು : ಮನೆಯ ಗೋಡೆಗೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಹಾನಿ

ಕಾರ್ಕಳ : ಮನೆಯ ಗೋಡೆಗೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಹಾನಿ ಸಂಭವಿಸಿರುವ ಘಟನೆ ಜೂ. 13ರಂದು ಮುಂಡ್ಕೂರಿನಲ್ಲಿ ಸಂಭವಿಸಿದೆ. ಶುಕ್ರವಾರ ಸಂಜೆ ಮಳೆ ಸುರಿಯುತ್ತಿರುವ ವೇಳೆ ಸಚ್ಚೇರಿಪೇಟೆ ಎಂಜಿ ರಸ್ತೆ ನಿವಾಸಿ ಸಫಿಯ ಎಂಬವರ ಮನೆಯ ಕಂಪೌಂಡ್ ಗೋಡೆಯು ಕುಸಿದು ಪಕ್ಕದ ಮನೆಯ ಎಂ.ಎಸ್. ಅಹ್ಮದ್ ಎಂಬವರ ವಾಸ್ತವ್ಯದ ಮನೆಯ ಗೋಡೆಗೆ ಬಿದ್ದು 20,000 ರೂ. ನಷ್ಟ ಉಂಟಾಗಿದೆ. ಕಂಪೌಂಡ್ ಗೋಡೆ ಕುಸಿದ ಪರಿಣಾಮವಾಗಿ ಎರಡೂ ಮನೆಯ ಪರಿಸ್ಥಿತಿಯು ಅಪಾಯಕಾರಿಯಾಗಿರುತ್ತದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲೂಕು ದಂಡಾಧಿಕಾರಿಯ ಮಾರ್ಗದರ್ಶನದಂತೆ ಎರಡು ಮನೆಯವರನ್ನೂ ಸಂಬಂಧಿಕರ ಮನೆಗೆ ಸ್ಥಳಾಂತರವಾಗಲು ತಿಳಿಸಲಾಗಿದೆ.































































































error: Content is protected !!
Scroll to Top