ಕಾರ್ಕಳ – ಹೆಬ್ರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ

ಕಾರ್ಕಳ : ಶನಿವಾರ (ಎ. 5) ಸಂಜೆ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ‌ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಸಂಜೆ‌ 4 ಗಂಟೆಯ ವೇಳೆಗೆ ಮೋಡ‌‌ ಕವಿದ ವಾತಾವರಣವಿದ್ದು, 5 ಗಂಟೆ ಸುಮಾರಿಗೆ ಮಳೆ ಪ್ರಾರಂಭವಾಗಿದೆ. ಕಾರ್ಕಳ ನಗರದಲ್ಲಿ ಸುಮಾರು 2 ಗಂಟೆಗಳ ಕಾಲ ಮಳೆ ಸುರಿದಿದೆ. ಕಾರ್ಕಳ ನಗರ,‌ ನಕ್ರೆ, ಪರಪ್ಪು, ಮಾಳ, ಕೆರ್ವಾಶೆ, ಶಿರ್ಲಾಲಿನಲ್ಲಿ ಗುಡುಗು ಸಹಿತ ಮಳೆಯಾಗಿದೆ.‌ ಬೆಳ್ಮಣ್, ನಿಟ್ಟೆಯಲ್ಲಿ ತುಂತುರು‌ ಮಳೆಯಾಗಿದೆ. ಹೆಬ್ರಿ ತಾಲೂಕಿನ ಹೆಬ್ರಿ, ಶಿವಪುರ, ಮುನಿಯಾಲು ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿದೆ.























































error: Content is protected !!
Scroll to Top