ಪಣಂಬೂರು ಬೀಚ್‌ನಲ್ಲಿ ಬಾಲಕ ನೀರುಪಾಲು

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಶನಿವಾರ ಮಧ್ಯಾಹ್ನ ನೀರಿನಲ್ಲಿ ಆಟವಾಡುವುದಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ.
ಬೈಕಂಪಾಡಿಯ ಮೀನಕಳಿಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿದ್ದ ಬಾಲಕ ತುಕರಾಮ(13) ಶಾಲೆ ಬಿಟ್ಟ ಬಳಿಕ ಸ್ನೇಹಿತನೊಂದಿಗೆ ಪಣಂಬೂರು ಬೀಚ್‌ಗೆ ಹೋಗಿದ್ದ. ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ನಾಪತ್ತೆಯಾಗಿದ್ದಾನೆ. ಬೀಚ್‌ನಲ್ಲಿ ವಿದ್ಯಾರ್ಥಿ ಮುಳುಗುತ್ತಿರುವುದನ್ನು ಕಂಡ ಇತರರು ರಕ್ಷಣಾ ದಳಕ್ಕೆ ತಿಳಿಸಿದ್ದಾರೆ. ತಕ್ಷಣ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ .
ಬಾಲಕ ಉತ್ತರ ಕರ್ನಾಟಕದ ಮೂಲದವನಾಗಿದ್ದು, ಕೆಲಸದ ನಿಮಿತ್ತ ಈತನ ಪಾಲಕರು ಬೈಕಂಪಾಡಿ ಬಳಿಯ ಮೀನಕಳಿಯ ಬಳಿ ವಾಸವಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.



















































































error: Content is protected !!
Scroll to Top