Thursday, December 1, 2022
spot_img
Homeಸುದ್ದಿನಂದಿನಿ ಹಾಲಿನ ಬೆಲೆ 2 ರೂ. ಏರಿಕೆ

ನಂದಿನಿ ಹಾಲಿನ ಬೆಲೆ 2 ರೂ. ಏರಿಕೆ

ಇಂದಿನಿಂದಲೇ ಹೊಸ ಬೆಲೆ ಜಾರಿ

ಬೆಂಗಳೂರು: ಕೊನೆಗೂ ಕೆಎಂಎಫ್ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿದೆ. ಪ್ರತಿ ಲೀಟರ್‌ಗೆ 2 ರೂ.ಯಂತೆ ಏರಿಕೆ ಮಾಡಲಾಗಿದ್ದು ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ.
ಕೆಎಂಎಫ್ ನಂದಿನಿ ಹಾಲು ಲೀಟರ್ ಗೆ 2 ರೂಪಾಯಿ ಹೆಚ್ಚಿಸಿದ್ದು, ಮೊಸರು ಒಂದು ಲೀಟರ್‌ ಬೆಲೆ 45ರಿಂದ 47 ರೂ.ಗೆ ಏರಿಕೆಯಾಗಿದೆ. ನಂದಿನಿ ಹಾಗೂ ಮೊಸರಿನ ಪರಿಸ್ಕೃತ ದರ ನ. 24ರಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಮೊದಲು ಹಾಲಿನ ಬೆಲೆ ಲೀಟರ್‌ಗೆ 3 ರೂ. ಏರಿಸಲು ನಿರ್ಧರಿಸಿ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಆದರೆ ಜನಸಾಮಾನ್ಯರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರಕಾರ ಬೆಲೆ ಏರಿಕೆಯನ್ನು ತಡೆಹಿಡಿದಿತ್ತು. ಇದೀಗ ನಿನ್ನೆ ನಡೆದ ಸಭೆಯಲ್ಲಿ ಕೊನೆಗೆ 2 ರೂ. ಏರಿಸುವ ಕುರಿತು ಸಹಮತಕ್ಕೆ ಬರಲಾಗಿದೆ.
ಬೆಂಗಳೂರಿನಲ್ಲಿ ನಡೆದ ಕೆಎಂಎಫ್​ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಹೆಚ್ಚುವರಿ ಸಂಗ್ರಹವಾಗುವ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಹೆಚ್ಚಳ ಮಾಡಿರುವಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ.
ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು. ಮೊನ್ನೇ ಕೆಎಂಎಫ್​ ಹಾಲಿನ ದರ ಹೆಚ್ಚಿಸಿದಾಗ ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.

ಪರಿಷ್ಕೃತ ಹೊಸ ಬೆಲೆ

  • ನಂದಿನಿ ಟೋನ್ಡ್ ಹಾಲು ಲೀಟರ್‌ಗೆ 39 ರೂಪಾಯಿ
  • ಹೋಮೋಜಿನೈಸ್ಡ್ ಟೋನ್ಡ್ ಹಾಲು 40 ರೂಪಾಯಿ
  • ಹೋಮೋಜಿನೈಸ್ಡ್ ಹಸುವಿನ ಹಾಲು 44 ರೂಪಾಯಿ
  • ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 45 ರೂಪಾಯಿ
  • ಹೋಮೋಜಿನೈಸ್ಡ್‌ ಸ್ಟ್ಯಾಂಡರ್ಡ್ ಹಾಲು 46 ರೂಪಾಯಿ
  • ನಂದಿನಿ ಸಮೃದ್ಧಿ ಹಾಲು 50 ರೂಪಾಯಿ
  • ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 52 ರೂಪಾಯಿ
  • ಮೊಸರು 47 ರೂಪಾಯಿ.

LEAVE A REPLY

Please enter your comment!
Please enter your name here

Most Popular

error: Content is protected !!