Saturday, December 10, 2022
spot_img
Homeಸುದ್ದಿಬಾಲಕಿ ಮೇಲೆ ಅತ್ಯಾಚಾರವೆಸಗಿ ಮತಾಂತರವಾಗಲು ಬೆದರಿಕೆ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಮತಾಂತರವಾಗಲು ಬೆದರಿಕೆ

ಮಂಡ್ಯದ ನಾಗಮಂಗಲದಲ್ಲಿ ಸಂಭವಿಸಿದ ಆಘಾತಕಾರಿ ಘಟನೆ

ಮಂಡ್ಯ : 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಲು ಬ್ಲಾಕ್‌ಮೇಲ್ ಮಾಡಿದ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
13 ವರ್ಷದ ಬಾಲಕಿಯ ಆಕ್ಷೇಪಾರ್ಹ ಚಿತ್ರಗಳನ್ನು ಇಟ್ಟುಕೊಂಡು ಮದುವೆಯಾಗಲು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಮತಾಂತರ ವಿರೋಧಿ ಕಾನೂನು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು 25 ವರ್ಷದ ಯೂನಸ್ ಪಾಷಾ ಅಲಿಯಾಸ್ ಫಯಾಜ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಬಾಲಕಿಯ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮಗುವಿನ ತಂದೆಯಾಗಿರುವ ಈತ ಬಾಲಕಿಗೆ ಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಳಿಕ ವಿಡಿಯೋ ಕರೆಗಳಲ್ಲಿ ಮಾತನಾಡಲು ಪ್ರಾರಂಭಿಸಿದ್ದಾನೆ. ಆತ ಮೊಬೈಲ್ ಕೊಡಿಸಿರುವುದು ಬಾಲಕಿಯ ಕುಟುಂಬದವರಿಗೆ ತಿಳಿದಿರಲಿಲ್ಲ.
ಒಂದು ದಿನ, ಆರೋಪಿ ವಿಡಿಯೋ ಕರೆಯಲ್ಲಿ ಬಾಲಕಿಯ ಆಕ್ಷೇಪಾರ್ಹ ದೃಶ್ಯಗಳನ್ನು ರೆಕಾರ್ಡ್‌ ಮಾಡಿಕೊಂಡು, ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಲು ಬಳಸಿಕೊಳ್ಳಲು ಒತ್ತಡ ಹಾಕಿದ್ದಾನೆ. ಬಾಲಕಿ ನಿರಾಕರಿಸಿದಾಗ, ಅವರ ಖಾಸಗಿ ಮಾತುಕತೆಗಳು ಮತ್ತು ಅಶ್ಲೀಲ ಫೋಟೋಗಳನ್ನು ಆಕೆಯ ಕುಟುಂಬಕ್ಕೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ.8 ರಂದು ಬಾಲಕಿಯ ಮನೆಯವರು ನಾಲ್ಕು ದಿನಗಳ ಕಾಲ ಶಿರಡಿಗೆ ಹೋಗಿದ್ದು, ಬಾಲಕಿಯನ್ನು ಅಜ್ಜಿಯೊಂದಿಗೆ ಬಿಟ್ಟು ಹೋಗಿದ್ದಾರೆ. ಆರೋಪಿ ನ.10 ರಂದು ಬಾಲಕಿಯ ಅಜ್ಜಿಗೆ ನಿದ್ದೆ ಮಾತ್ರೆಗಳನ್ನು ಆಹಾರದೊಂದಿಗೆ ಬೆರೆಸಿ ಬಲವಂತವಾಗಿ ತಿನ್ನಿಸಿದ್ದಾನೆ. ಆಕೆ ಪ್ರಜ್ಞೆ ತಪ್ಪಿದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ..
ನ.12 ರಂದು ಶಿರಡಿಯಿಂದ ಹಿಂದಿರುಗಿದ ನಂತರ ಪಾಲಕರು ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ್ದಾರೆ. ಬಾಲಕಿ ನ.18 ರಂದು ತಂದೆ ತಾಯಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ನ.19 ರಂದು ಬಾಲಕಿಯ ತಂದೆ ಯೂನಸ್ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!