ಬೆಂಕಿ ಅವಘಢ : 7 ಕಾರುಗಳು ಭಸ್ಮ

ಪಟಾಕಿ ಸುಟ್ಟಾಗ ಬೆಂಕಿ ಹತ್ತಿಕೊಂಡ ಅನುಮಾನ

ಮುಂಬಯಿ : ನಗರದ ಗಿರ್ಗಾಂವ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 7 ಕಾರುಗಳ ಹಾಗು ಹಲವು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.
ಪಟಾಕಿ ಹೊಡೆದಾಗ ಪಕ್ಕದಲ್ಲಿದ್ದ ಗೋದಾಮಿಗೆ ಬೆಂಕಿ ಹತ್ತಿಕೊಂಡು ಅದರ ಎದುರು ನಿಲ್ಲಿಸಿದ್ದ ಕಾರುಗಳು ಸುಟ್ಟುಹೋಗಿವೆ ಎನ್ನಲಾಗಿದೆ.
ಅಗಲ ಕಿರಿದಾದ ರಸ್ತೆಯಲ್ಲಿ ಅಗ್ನಿಶಾಮಕ ವಾಹನಕ್ಕೆ ಕ್ಷಿಪ್ರವಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಜನರು ಬೆಂಕಿ ನಂದಿಸುವಷ್ಟರಲ್ಲಿ ವಾಹನಗಳು ಕರಕಲಾಗಿದ್ದವು. ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Latest Articles

error: Content is protected !!