Thursday, December 1, 2022
spot_img
Homeಸುದ್ದಿಕೋಟಿ ಕಂಠ ಗಾಯನ ನೋಂದಣಿಗೆ ಅದ್ಭುತ ಪ್ರತಿಸ್ಪಂದನೆ

ಕೋಟಿ ಕಂಠ ಗಾಯನ ನೋಂದಣಿಗೆ ಅದ್ಭುತ ಪ್ರತಿಸ್ಪಂದನೆ

1.5 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ

ಬೆಂಗಳೂರು: ರಾಜ್ಯೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ಅ.28ರಂದು ನಡೆಸಲುದ್ದೇಶಿಸಿರುವ ಕೋಟಿ ಕಂಠ ಗಾಯನಕ್ಕೆ ಈಗಾಗಲೇ ನೋಂದಾಯಿಸಿದವರ ಸಂಖ್ಯೆ 1 ಕೋಟಿ ದಾಟಿದೆ ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.
ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಜನರು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಇನ್ನೂ ಒಂದು ದಿನ ಇರುವುದರಿಂದ ಇನ್ನಷ್ಟು ಜನರು ನೋದಾಯಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದ್ದಾರೆ.
ನೋದಣಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತ್ಯೇಕ ಕ್ಯೂಆರ್‌ ಕೋಡ್‌ ರಚಿಸಿದ್ದು, ಇದರ ಮೂಲಕ ಜನರು ನೋದಣಿ ಮಾಡಿಕೊಂಡಿದ್ದಾರೆ. ದೇಶದ ಎಲ್ಲ 29 ರಾಜ್ಯಗಳಿಂದ ಮಾತ್ರವಲ್ಲದೆ 25 ದೇಶಗಳಲ್ಲಿರುವ ಕನ್ನಡಿಗರು, ಕನ್ನಡಾಭಿಮಾನಿಗಳು ನೋಂದಾಯಿಸಿಕೊಂಡಿದ್ದಾರೆ. ಅಂತಿಮವಾಗಿ 1.50 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷಯಿದೆ ಎಂದು ಹೇಳಿದ್ದಾರೆ.
ಅ.28ರಂದು ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಕುವೆಂಪು ರಚಿಸಿದ ಜಯ ಭಾರತ ಜನನಿಯ ತನುಜಾತೆಯಿಂದ ಹಾಡುಗಾರಿಕೆ ಶುರುವಾಗುತ್ತದೆ. ಒಟ್ಟು ಆರು ಕನ್ನಡದ ಹಾಡುಗಳನ್ನು ಹಾಡಬೇಕು.

LEAVE A REPLY

Please enter your comment!
Please enter your name here

Most Popular

error: Content is protected !!