ಮಂಗಳೂರು: ಬಿಎಂಡಬ್ಲ್ಯೂ ಕಾರು ಢಿಕ್ಕಿ – ಗಾಯಾಳು ಮಹಿಳೆಯ ಬ್ರೈನ್ ಡೆಡ್

ಮಂಗಳೂರು : ಎ. 9ರಂದು ನಗರದ ಬಲ್ಲಾಳ್ ಬಾಗ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ (47) ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಎಂಡಬ್ಲ್ಯು ಕಾರು ಚಲಾಯಿಸುತ್ತಿದ್ದ ನಗರದ ಮಣ್ಣಗುಡ್ಡ ನಿವಾಸಿ ಇಂಟೀರಿಯರ್ ಡೆಕೊರೇಟರ್ ಶ್ರವಣ್ ದೇವಾಡಿಗ ಎಂಬಾತ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟಿ ಸ್ಕೂಟರ್ ಮತ್ತು ಕಾರಿಗೆ ಢಿಕ್ಕಿ ಹೊಡೆದಿತ್ತು. ಈ ಅಪಘಾತದಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪ್ರೀತಿ ಮನೋಜ್ ಮತ್ತು ಕಾರಿನಲ್ಲಿದ್ದ ಬಾಲಕ ಅಮಯ್ ಜಯದೇವನ್ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಿ ಮನೋಜ್ ಮೃತಪಟ್ಟಿದ್ದಾರೆ. ಆರೋಪಿ ಕಾರು ಚಾಲಕನಿಗೆ ಸಾರ್ವಜನಿಕರು ಕಾರಿನಿಂದ ಹೊರಗೆ ಎಳೆದು ತಂದು ಥಳಿಸಿದ್ದರು. ಅಪಘಾತದ ಮತ್ತು ‌ಹಲ್ಲೆಗೈದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ
ಮೃತ ಮಹಿಳೆಯ ಅಂಗಾಂಗ ದಾನ ಮಾಡಲು ‌ಕುಟುಂಬಸ್ಥರು‌ ನಿರ್ಧರಿಸಿದ್ದು, ಅದರ ಪ್ರಕ್ರಿಯೆ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.





























































































































































































































error: Content is protected !!
Scroll to Top