ಯರ್ಲಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಕಾರ್ಕಳ : ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ. 2. 25 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ವಿ. ಸುನಿಲ್‌ ಕುಮಾರ್‌ ಎ. 21ರಂದು ಗುದ್ದಲಿ ಪೂಜೆ ನೆರವೇರಿಸಿದರು. ರೂ. 25 ಲಕ್ಷ ಅನುದಾನದದಲ್ಲಿ ಗೋವಿಂದೂರು ಮಾವಿನಕಟ್ಟೆ – ನೆಲ್ಲಿಗುಡ್ಡೆ ರಸ್ತೆ, ರೂ. 50 ಲಕ್ಷದಲ್ಲಿ ಗೋವಿಂದೂರು ಕಟ್ಟ ರಸ್ತೆ, ರೂ. 50 ಲಕ್ಷದಲ್ಲಿ ಜಾರ್ಕಳ ಅರ್ಬಿ ರಸ್ತೆ, ರೂ. 50 ಲಕ್ಷ ಅನುದಾನದ ಜಾರ್ಕಳ ಶಾಂತಿಪಲ್ಕೆ ರಸ್ತೆ, ರೂ. 50 ಲಕ್ಷ ರೂ.ವಿನಲ್ಲಿ ಜಾರ್ಕಳ ನೆಲ್ಲಿಗುಡ್ಡೆ ರಸ್ತೆ ಕಾಮಗಾರಿಗಳ ಗುದ್ದಲಿಪೂಜೆ ಮತ್ತು ರೂ. 50 ಲಕ್ಷ ಅನುದಾನದ ಗೋವಿಂದೂರು ಸಪ್ತಗಿರಿ ನೂತನ ರಸ್ತೆಯನ್ನು ಉದ್ಘಾಟಿಸಲಾಯಿತು. ಯರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಮಾಜ್ ಅಧ್ಯಕ್ಷ ವಿಕ್ರಂ ಹೆಗ್ಡೆ, ಜಾರ್ಕಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮಾಕ್ತೇಸರ ಮೋಹನ್ ದಾಸ್ ಹೆಗ್ಡೆ, ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತಪಟ್ಟಾಭಿರಾವ್, ನ್ಯಾಯವಾದಿ, ಜಾರ್ಕಳ ಶಾಂತಿ ಯುವಕ ಮಂಡಲದ ಅಧ್ಯಕ್ಷ ಸದಾನಂದ ಸಾಲಿಯಾನ್, ಜಿಲ್ಲಾ ಪಂಚಾಯತ್‌ ನಿಕಟಪೂರ್ವ ಸದಸ್ಯ ಸುಮಿತ್ ಶೆಟ್ಟಿ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯೆ ನಿರ್ಮಲಾ ರಾಣೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುನೀಲ್ ಹೆಗ್ಡೆ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್ ಅಮೀನ್, ಕಮಲಾಕ್ಷ ನಾಯಕ್, ಉದ್ಯಮಿ ರಮೇಶ್ ಶೆಟ್ಟಿ ಜಾರ್ಕಳ, ನೀರೆ ಗ್ರಾಮಪಂಚಾಯತ್ ಅಧ್ಯಕ್ಷ ಶಾಲಿನಿ ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ
ಯರ್ಲಪಾಡಿ ಗ್ರಾಮದ ಕಾಂಗ್ರೆಸ್‌ ಪ್ರಮುಖರಾದ ಯಶೋಧಾ ಶೆಟ್ಟಿ, ಶಕುಂತಳಾ ಅಮೀನ್‌ ಭಾರತೀಯ ಜನತಾ ಪಾರ್ಟಿಗೆ ಇದೇ ಸಂದರ್ಭ ಸೇರ್ಪಡೆಗೊಂಡರು.
ಕಳೆದ ಎಂಟು ವರ್ಷಗಳಲ್ಲಿ ಯರ್ಲಪಾಡಿ ಗ್ರಾಮ ಪಂಚಾಯತ್ ಕರ್ತವ್ಯ ನಿರ್ವಹಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್ ಅವರನ್ನು ಗ್ರಾಮಸ್ಥರ ಹಾಗೂ ವಿಕಾಸ ಸಂಜೀವಿನಿ ಒಕ್ಕೂಟದ ವತಿಯಿಂದ ಇದೇ ವೇಳೆ ಸನ್ಮಾನಿಸಲಾಯಿತು. ಸುನಿಲ್ ಹೆಗ್ಡೆ ಸ್ವಾಗತಿಸಿ, ಸಂತೋಷ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ್ ಪೂಜಾರಿ ವಂದಿಸಿದರು.









































































































































































error: Content is protected !!
Scroll to Top