Tuesday, May 17, 2022
spot_img
Homeದೇಶಭಾರತಕ್ಕೆ ಯುದ್ಧ ವಿಮಾನ ತಂತ್ರಜ್ಞಾನ ನೀಡುವುದಾಗಿ ಘೋಷಿಸಿದ ಬ್ರಿಟನ್‌

ಭಾರತಕ್ಕೆ ಯುದ್ಧ ವಿಮಾನ ತಂತ್ರಜ್ಞಾನ ನೀಡುವುದಾಗಿ ಘೋಷಿಸಿದ ಬ್ರಿಟನ್‌

ಹೊಸದಿಲ್ಲಿ : ಭಾರತಕ್ಕೆ ಯುದ್ಧ ವಿಮಾನ ನಿರ್ಮಾಣ ತಂತ್ರಜ್ಞಾನ ನೀಡುವುದರ ಜತೆಗೆ ರಕ್ಷಣಾ ಪರಿಕರಗಳ ಪೂರೈಕೆಯಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಬ್ರಿಟನ್‌ ಘೋಷಿಸಿದೆ. ರಷ್ಯಾ-ಉಕ್ರೇನ್‌ ಸಮರದಿಂದ ಉದ್ಭವಿಸಿರುವ ಭೌಗೋಳಿಕ ರಾಜಕೀಯ ಪ್ರಾಬಲ್ಯದ ಮೇಲಾಟದ ಮೇಲೆ ಕಣ್ಣಿಸಿರುವ ಬ್ರಿಟನ್‌, ಭಾರತದ ಜತೆ ರಕ್ಷಣಾ ಬಂಧವನ್ನು ವಿಸ್ತರಿಸಲು ಮುಂದಾಗಿದೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಹೈದರಾಬಾದ್‌ ಹೌಸ್‌ನಲ್ಲಿ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಂಕೀರ್ಣವಾದ ಕಾನೂನಾತ್ಮಕ ಅಡೆತಡೆಗಳಿಲ್ಲದೇ ರಕ್ಷಣಾ ಸಾಮಗ್ರಿಗಳನ್ನು ಭಾರತಕ್ಕೆ ತ್ವರಿತಗತಿಯಲ್ಲಿ ಪೂರೈಸಲು ಬ್ರಿಟನ್‌ನ ಮುಕ್ತ ಸಾಮಾನ್ಯ ರಫ್ತು ಪರವಾನಗಿ ಮಹತ್ವದ ಪಾತ್ರ ವಹಿಸಲಿದೆ.
ಹಿಂದೂ ಮಹಾಸಾಗರದಲ್ಲಿ ಅಪಾಯಗಳನ್ನು ಎದುರಿಸಲು ಅಗತ್ಯವಿರುವ ಹೊಸ ತಂತ್ರಜ್ಞಾನ ಹಾಗೂ ದೇಶೀಯವಾಗಿ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಭಾರತಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ರಕ್ಷಣಾ ಸಾಮಗ್ರಿಗಳ ಆಮದು ವಿಚಾರದಲ್ಲಿ ಅಧಿಕಾರಶಾಹಿ ವಿಳಂಬ ತಪ್ಪಿಸಲು ಮುಕ್ತ ವ್ಯಾಪಾರ ಒಪ್ಪಂದವನ್ನು ಈ ವರ್ಷದ ದೀಪಾವಳಿ ಹೊತ್ತಿಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಾನೂನಾತ್ಮಕ ಅಡೆತಡೆಗಳಿಲ್ಲದೇ ರಕ್ಷಣಾ ಪರಿಕಗಳ ಶೀಘ್ರ ಪೂರೈಕೆಗೆ ಮುಕ್ತ ಸಾಮಾನ್ಯ ರಫ್ತು ಪರವಾನಗಿ ನೀಡುವ ವಿಚಾರದಲ್ಲೂ ತಮ್ಮ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದು ಬೋರಿಸ್‌ ಜಾನ್ಸನ್‌ ಘೋಷಿಸಿದರು.

ಭೂಮಿ, ಜಲ, ವಾಯು, ಸೈಬರ್‌ ಸುರಕ್ಷತೆ ಸೇರಿ ಐದು ವಲಯಗಳಲ್ಲಿನ ಭದ್ರತೆಗೆ ಸಂಬಂಧಿಸಿದ ಹೊಸ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಜಂಟಿಯಾಗಿ ಕೆಲಸ ಮಾಡಲು ನಿರ್ಧರಿಸಿವೆ. ಹಿಂದೂ ಮಹಾ ಸಾಗರದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ಹತ್ತಿಕ್ಕಲು ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!