ಮೇ 1: ಹುಬ್ಬಳ್ಳಿ‌ಯಿಂದ ಮಂಗಳೂರು, ಮೈಸೂರಿಗೆ ಇಂಡಿಗೋ ವಿಮಾನ ಸೇವೆ ಆರಂಭ

ಹುಬ್ಬಳ್ಳಿ: ನಗರದಿಂದ ಮೈಸೂರು, ಮಂಗಳೂರಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮೇ. 1 ರಿಂದ ಇಂಡಿಗೋ ವಿಮಾನ ಸೇವೆಯನ್ನು ಆರಂಭಿಸಲಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಯ ಮೇರೆಗೆ ಇಂಡಿಗೋ ಈ ಸೇವೆಯನ್ನು ಆರಂಭಿಸಲಿದೆ. ಮೇ. 1 ರಿಂದ ತೊಡಗಿದಂತೆ ವಾರದಲ್ಲಿ 4 ದಿನ ಮಂಗಳೂರು ಮತ್ತು ಮೇ. 3 ರಿಂದ ವಾರದಲ್ಲಿ 3 ದಿನ ಮೈಸೂರಿಗೆ ವಿಮಾನ ಹಾರಾಟ ನಡೆಯಲಿದೆ ಎಂದು ಸಚಿವರ ನವದೆಹಲಿ ಕಚೇರಿ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ.
ಈ ವಿಮಾನ ಸೇವೆಯನ್ನು ಆರಂಭಿಸಲು ಸಾಧ್ಯವಾಗಿಸಿದ ಕೇಂದ್ರ ನಾಗರಿಕ ವಿಮಾನ‌ಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಇಂಡಿಗೋ‌ದ ಆಡಳಿತ ಮತ್ತು ಸಿಬ್ಬಂದಿ ವರ್ಗಕ್ಕೆ ಜೋಶಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





























































































































































































































error: Content is protected !!
Scroll to Top