ಶ್ರೀನಗರ: ಕಣಿವೆ ರಾಜ್ಯ ಜಮ್ಮು – ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ಗೆ ಇಬ್ಬರು ಎಲ್ಇಟಿ ಉಗ್ರರ ದಮನವಾಗಿದೆ.
ಜಿಲ್ಲೆಯ ಕುಲ್ಗಾಂ ಮತ್ತು ಸಿರ್ಹಾಮಾ ಗಳಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿಯ ಮೇರೆಗೆ ಜಮ್ಮು ಕಾಶ್ಮೀರದ ಪೊಲೀಸರು, ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.
ಸಿರ್ಹಾಮಾದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಇದಕ್ಕೆ ಸೂಕ್ತ ಉತ್ತರ ನೀಡಿದ ಯೋಧರ ಗುಂಡಿಗೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಕುಲ್ಗಾಂನ ಚಾಖಿಸಮದ್ ಎಂಬಲ್ಲಿ ಅವಿತಿರುವ ಉಗ್ರರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಯೋಧರ ಗುಂಡಿಗೆ ಓರ್ವ ಉಗ್ರನ ನಿಗ್ರಹವಾಗಿದೆ. ಸ್ಥಳದಲ್ಲಿ ಶೋಧಕಾರ್ಯ ಮುಂದುವರಿದಿದೆ.
ಜಮ್ಮು ಕಾಶ್ಮೀರ : ಇಬ್ಬರು ಉಗ್ರರನ್ನು ಎನ್ಕೌಂಟರ್ ಮಾಡಿದ ಭಾರತೀಯ ಭದ್ರತಾ ಪಡೆಗಳು
Recent Comments
ಕಗ್ಗದ ಸಂದೇಶ
on