ಕಾರ್ಕಳ : ಕರ್ತವ್ಯ ನಿಷ್ಟೆ ಮತ್ತು ವೃತ್ತಿಪರತೆಗೆ ಮತ್ತೊಂದು ಹೆಸರೇ ಸ್ವರ್ಗೀಯ ಸುಂದರ ಪೂಜಾರಿ ಅವರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ದಿ. ಗೋಪಾಲ ಭಂಡಾರಿ ಅವರ ಅಪ್ತ ಸಹಾಯಕನಾಗಿ ಸರಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವಲ್ಲಿ ಅವರಿಗಿದ್ದ ಕಾಳಜಿ ಅವರನ್ನು ಇನ್ನೂ ಜೀವಂತವಾಗಿ ಉಳಿಸಿದೆ ಎಂದು ಹಿರಿಯ ಉದ್ಯಮಿ ಕಾರ್ಕಳ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು ಹೇಳಿದ್ದಾರೆ.
ಅವರು ಇಲ್ಲಿನ ಪೆರ್ವಾಜೆಯ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಇತ್ತೀಚೆಗೆ ನಿಧನರಾದ ಸುಂದರ ಪೂಜಾರಿ ಅವರಿಗೆ ನಡೆದ ಸಾರ್ವಜನಿಕ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ ಸಲ್ಲಿಸಿ ಮಾತಾಡುತ್ತಿಧ್ದರು.
ನುಡಿನಮನ ಸಲ್ಲಿಸಿ ಮಾತಾಡಿದ ರಾಜ್ಯ ಕಲ್ಲುಗಣಿ ಗುತ್ತಿಗೆದಾರರ ಸಂಘದ ಅದ್ಯಕ್ಷ ರವಿ ಶೆಟ್ಟಿ, ಸ್ವರ್ಗೀಯ ಸುಂದರ ಪೂಜಾರಿ ಒಬ್ಬ ಕರ್ಮಯೋಗಿ. ಸರಕಾರದ ಕೆಲಸವನ್ನು ದೇವರ ಕೆಲಸವೆಂದು ತಿಳಿದು ವೃತ್ತಿ ಜೀವನ ನಡೆಸಿದ ಆದರ್ಶ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜೋಜ್೯ ಕ್ಯಾಸ್ತಲೀನೋ, ಪುರಸಭಾ ಮಾಜಿ ಅಧ್ಯಕ್ಷ ಚಂದ್ರಹಾಸ ಸುವರ್ಣ, ಮಾಜಿ ಉಪಾಧ್ಯಕ್ಷ ಗಿರಿಧರ ನಾಯಕ್, ಪುರಸಭಾ ಪ್ರತಿಪಕ್ಷ ನಾಯಕ ಆಶ್ಫಕ್ ಅಹಮ್ಮದ್, ನಿವೃತ್ತ ಪ್ರಾಂಶುಪಾಲ ಮಾಧವ ಭಟ್, ಪುರಸಭಾ ಸದಸ್ಯೆ ನಳಿನಿ ಆಚಾರ್ಯ, ಸುಶಾಂತ್ ಮಾತಾಡಿ ದಿವಂಗತರ ಗುಣಗಾನ ಮಾಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸುಭೀತ್ ಕುಮಾರ್, ವಿವೇಕಾನಂದ ಶೆಣೈ, ಪುರಸಭಾ ಸದಸ್ಯೆ ಪ್ರತಿಮಾ ರಾಣೆ, ಪ್ರದೀಪ್ ಕುಮಾರ್, ಸತೀಶ್ ರಾವ್, ಶೋಭ, ಗಣೇಶ್ ದೇವಾಡಿಗ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪ್ರಭಾಕರ ಬಂಗೇರ ಪ್ರಸ್ತಾವನೆ ಗೈದು ಕಾರ್ಯಕ್ರಮ ನಿರೂಪಿಸಿದರು.








































