ಆ. 21 : ಜ್ಞಾನಸುಧಾ ಕಾಲೇಜು ದಶಮಾನೋತ್ಸವ

ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ ಜನ್ಮಶತಾಬ್ದಿ

ಕಾರ್ಕಳ : ಅಜೆಕಾರ್ ಪದ್ಮಗೋಪಾಲ್‍ ಎಜ್ಯುಕೇಶನ್‍ ಟ್ರಸ್ಟ್‌ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ 100ನೇ ಜನ್ಮದಿನದ ಪ್ರಯುಕ್ತ ಆ. 21ರಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣ ಗಣಿತನಗರದಲ್ಲಿ ಜನ್ಮ ಶತಾಬ್ದಿ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ನಿಯಮಾನುಸಾರ ಎರಡು ವಿಭಾಗದಲ್ಲಿಕಾರ್ಯಕ್ರಮ ಆಯೋಜಿಸಲಾಗಿದ್ದು, ಪೂರ್ವಾಹ್ನ ಬೃಹತ್‍ ರಕ್ತದಾನ ಶಿಬಿರ, ಗಾಲಿಕುರ್ಚಿ ವಿತರಣೆ, ಅನಾಥಾಶ್ರಮಗಳಿಗೆ ಧನ ಸಹಾಯ ಹಾಗೂ 2021ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನಡೆಯಲಿದೆ. ಸಂಜೆ 8 ಗಂಟೆಗೆ ನೂತನವಾಗಿ ನಿರ್ಮಿಸಿರುವ ಅಟಲ್‍ ಟಿಂಕರಿಂಗ್ ಲ್ಯಾಬ್‍ ಉದ್ಗಾಟನೆ, ಸಚಿವರಿಗೆ ಅಭಿನಂದನಾ ಕಾರ್ಯಕ್ರಮ, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಪೌರಕಾರ್ಮಿಕರಿಗೆ ಗೌರವ ಪುರಸ್ಕಾರ, ಸಂಸ್ಥೆಯ ನಿವೃತ್ತ ಉದ್ಯೋಗಿಗಳಿಗೆ ಬೀಳ್ಕೊಡುಗೆ ಮತ್ತು 2021ರಲ್ಲಿ 600ಕ್ಕೆ 600 ಅಂಕಗಳಿಸಿದ ದ್ವಿತೀಯ ಪಿ.ಯು.ಸಿ.ಯ 43 ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಜೆ.ಇ.ಇ. ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‍ ಕುಮಾರ್, ಉಡುಪಿ ಜಿಲ್ಲಾಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಮಂಗಳೂರು ಪ್ರಾಂತ್ಯದ ಮಾಜಿ ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ಕ್ರಿಸ್ಟೆಲ್ಲ, ಕಾರ್ಕಳ ರುಡ್‌ಸೆಟ್‌ ಅಧ್ಯಕ್ಷ ಡಾ. ಕೆ. ರಾಮಚಂದ್ರ ಜೋಷಿ, ಪ್ರಭಾಕರ ಜಿ. ಶೆಟ್ಟಿ, ಎ.ಪಿ.ಜಿ.ಇ.ಟಿ. ಆಡಳಿತ ಮಂಡಳಿ ಸದಸ್ಯ ಎ. ಶಾಂತಿರಾಜ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.













































































































































































































































































error: Content is protected !!
Scroll to Top