ಕಾರ್ಕಳ : ಸಾಣೂರು ಗ್ರಾಮದ ಡಾ. ಹರ್ಷಿತಾ ಶೈಲೇಶ್ ಅವರಿಗೆ ಕತಾರ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿದೆ. ಸೆಲ್ ಆಂಡ್ ಮೊಲಿಕ್ಯುಲಾರ್ ಬಯೋಲಜಿ ಕ್ಷೇತ್ರದಲ್ಲಿ ಪ್ರೊ. ಸೈದ್ ಸಿತ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ” ದಿ ರೋಲ್ ಆಫ್ ಪ್ರೋಟಿನ್ ಆರ್ಜಿನಿಂಗ್ ಮಿಥೈಲ್ ಟ್ರಾನ್ಸ್ ಫರೇಸ್ 5 ಇನ್ ವಿಂಟ್/ ಬೀಟ್ ಕೆಟನಿನ್ ಪ್ರೊಲಿಫರೇಟಿವ್ ಸಿಗ್ನಲಿಂಗ್ ಇನ್ ಬ್ರೆಸ್ಟ್ ಕ್ಯಾನ್ಸರ್” ಪ್ರಬಂಧಕ್ಕೆ ಕತಾರ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾ. ಹರ್ಷಿತಾ ಶೈಲೇಶ್ ಅವರು ಕಳೆದ 11 ವರ್ಷಗಳಿಂದ ಕತಾರ್‌ನಲ್ಲಿ ನೆಲೆಸಿರುತ್ತಾರೆ. ಇವರು ಕಾರ್ಕಳ ಹರ್ಷಿತಾ ಟೈಮ್ಸ್ ಮಾಲಕ ಟಿ.ಕೆ. ರಘುವೀರ್ ಹಾಗೂ ನಿವೃತ್ತ ಮುಖ್ಯಶಿಕ್ಷಕಿ ಪ್ರಮೀಳಾ ದಂಪತಿ ಪುತ್ರಿ.
ಸಾಣೂರಿನ ಡಾ. ಹರ್ಷಿತಾ ಶೈಲೇಶ್ ಅವರಿಗೆ ಡಾಕ್ಟರೇಟ್








































