ಕೊರೊನಾ ಸಂತ್ರಸ್ತರಿಗೆ ಬಿಜೆಪಿ ತನ್ನ ಕೈಯಿಂದ ಪರಿಹಾರ ನೀಡುವುದು ಬೇಡ-ಬಿಪಿನ್‌ ಚಂದ್ರಪಾಲ್‌

ಕಾರ್ಕಳ : ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಸಂತ್ರಸ್ತರಾದವರಿಗೆ ಬಿಜೆಪಿ ತನ್ನ ಕೈಯಿಂದ ಪರಿಹಾರ ನೀಡುವುದು ಬೇಡ. ಸರಕಾರದ ವಿವಿಧ ಮೂಲಗಳಿಂದ ಸಂಗ್ರಹಿತವಾದ ಪೆಟ್ರೋಲ್ ಡೀಸಿಲ್, ಅಡುಗೆ ಅನಿಲ, ಜಿಎಸ್ಟಿ ಹಾಗೂ ಪಿಎಂ ಕೇರ್ ಫಂಡಿನ ಲೆಕ್ಕವಿಲ್ಲದ ಹಣವನ್ನು ವಿನಿಯೋಗಿಸಿದರೆ ಸಾಕು ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನಕ್ರೆ ಹೇಳಿದರು.
ಅವರು ಮಂಗಳವಾರ ಕಾರ್ಕಳ ಶಾಸಕರ ಕಚೇರಿ ಎದುರು ಕಾಂಗ್ರೆಸ್‌ ವತಿಯಿಂದ ನಡೆದ ಜನಾಗ್ರಹ ಆಂದೋಲನದಲ್ಲಿ ಮಾತನಾಡಿ, ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಕನಿಷ್ಟ 5 ಲಕ್ಷ ರೂ. ಪರಿಹಾರ, ಬಿಪಿಲ್ ಕುಟುಂಬಗಳಿಗೆ 5 ಸಾವಿರ ರೂ. ಆರ್ಥಿಕ ನೆರವಿನೊಂದಿಗೆ ಆಹಾರದ ಕಿಟ್, ಕೃಷಿ ಯಂತ್ರೋಪಕರಣ, ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡುವಂತೆ ಆಗ್ರಹಿಸಿದರು.

ಆಶ್ವಾಸನೆಯಿಂದ ಜನರ ಸಂಕಷ್ಟ ದೂರವಾಗದು-ಮಂಜುನಾಥ ಪೂಜಾರಿ
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕೇವಲ ಆಶ್ವಾಸನೆಯಿಂದ ಜನರ ಸಂಕಷ್ಟ ದೂರವಾಗದು. ಸರಕಾರ ವಾಸ್ತವದತ್ತ ಗಮನ ಹರಿಸಿ ಪರಿಹಾರ ನೀಡುವುದು ಅಗತ್ಯವೆಂದರು.
ಡಿಸಿಸಿ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾರ್ಕಳ ಬ್ಲಾಕ್ ಎಸ್ಸಿ ಘಟಕಾಧ್ಯಕ್ಷ ಅಣ್ಣಪ್ಪ ನಕ್ರೆ ಮಾತಾಡಿದರು. ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಯುವ ಕಾಂಗ್ರಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಕೃಷಿ ಘಟಕ ಕಾರ್ಯದರ್ಶಿ ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ರಾಘವ ದೇವಾಡಿಗ, ಯುವ ಕಾಂಗ್ರಸ್ ಅಧ್ಯಕ್ಷ ಯೋಗೀಶ್ ಇನ್ನ, ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಮಾಜಿ ಜಿ.ಪಂ.‌ ಸದಸ್ಯ ಸುಧಾಕರ ಶೆಟ್ಟಿ, ರವಿಶಂಕರ ದೇವಾಡಿಗ, ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಆರೀಫ್ ಕಲ್ಲೊಟ್ಟೆ, ಬ್ಲಾಕ್ ಘಟಕದ ಅಸ್ಲಾಂ, ಯುವ ಕಾಂಗ್ರೆಸ್ ಕೃಷ್ಣ ಶೆಟ್ಟಿ, ಪುರ ಸಭಾ ಸದಸ್ಯ ಆಶ್ಪಕ್ ಅಹಮ್ಮದ್, ಹರೀಶ್ ಕುಮಾರ್, ಶುಭದಾ ರಾವ್, ಪ್ರತಿಮಾ, ರೆಹಮತ್, ಮಾಜಿ ಸದಸ್ಯರಾದ ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಸುಶಾಂತ್ ಸುಧಾಕರ್, ರಾಮಕೃಷ್ಣ ಶೆಟ್ಟಿ ಅಜೆಕಾರು, ಸುಂದರ ಗೌಡ, ಅಡ್ಲಿನ್, ಸತೀಶ್ ಕಾರ್ಕಳ, ರಮೇಶ ಬಂಗ್ಲೆಗುಡ್ಡೆ, ಶಶಿಕಲಾ, ಅನಿತಾ ಫ್ರಾನ್ಸಿಸ್, ಮಾಲಿನಿ ರೈ, ಸುನೀಲ್ ಭಂಡಾರಿ, ಉಷಾ, ಶೊಭಾ ಇತರರು ಉಪಸ್ಥಿತರಿದ್ದರು.





























































































































































































































error: Content is protected !!
Scroll to Top