Saturday, July 24, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಅನ್‌ ಲಾಕ್‌- ತೆರೆದ ಅಂಗಡಿ ಮುಂಗಟ್ಟು- ವಾಹನ ದಟ್ಟಣೆ ವಿರಳ

ಕಾರ್ಕಳ ಅನ್‌ ಲಾಕ್‌- ತೆರೆದ ಅಂಗಡಿ ಮುಂಗಟ್ಟು- ವಾಹನ ದಟ್ಟಣೆ ವಿರಳ

ಕಾರ್ಕಳ : ಸರಕಾರ ಉಡುಪಿ ಜಿಲ್ಲೆಯಲ್ಲಿ ಅನ್‌ ಲಾಕ್‌ ಘೋಷಣೆ ಮಾಡಿದಂತೆ ಕಾರ್ಕಳ ತಾಲೂಕಿನಲ್ಲಿ ಮಂಗಳವಾರ ಅಂಗಡಿ ಮುಂಗಟ್ಟು, ಹೊಟೇಲ್‌, ಜವುಳಿ ಮಳಿಗೆ, ಸೆಲೂನ್‌ಗಳು ತೆರೆದಿತ್ತು. ಸೋಮವಾರ ಕಾರ್ಕಳ ಪೇಟೆಯಲ್ಲಿ ವಾಹನ ದಟ್ಟಣೆ ಕಂಡುಬಂದಿದ್ದರೂ ಮಂಗಳವಾರ ಮಧ್ಯಾಹ್ನ ತನಕ ಜನಸಂದಣಿ, ವಾಹನ ದಟ್ಟಣೆ ಕಡಿಮೆಯಿತ್ತು. ಸಂಜೆ 5ರ ತನಕ ಅಂಗಡಿ ಮುಂಗಟ್ಟು ತೆರಿದಿರುವ ಕಾರಣ ಜನಸಂದಣಿ ವಿರಳವಾಗಿತ್ತು. ಶೇ. 50ರ ಸಿಬ್ಬಂದಿಯಂತೆ ಹೊಟೇಲ್‌, ಇನ್ನಿತರ ಉದ್ಯಮಗಳು ಕಾರ್ಯಚರಿಸುತ್ತಿತ್ತು. ಕಾರ್ಕಳ ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಅಂಗಡಿಗಳು ತೆರೆದಿದ್ದರೂ ಅಲ್ಲೊಂದು ಇಲ್ಲೊಂದು ಅಂಗಡಿಗಳು ಮುಚ್ಚಿದ್ದವು. ಕೆಲವೊಂದು ಸರಕಾರಿ ಬಸ್‌ಗಳ ಓಡಾಟ ಕಂಡುಬಂದಿದ್ದರೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ.‌

ಕಾರ್ಕಳ : ಸೋಮವಾರ 27 ಪಾಸಿಟಿವ್‌

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜೂ. 21ರಂದು 116 ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 53, ಕುಂದಾಪುರ 31, ಕಾರ್ಕಳ 27, ಹೊರ ಜಿಲ್ಲೆಯ ಐವರಲ್ಲಿ ಪಾಸಿಟಿವ್‌ ದೃಢಪಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 1662 ಸಕ್ರೀಯ ಪ್ರಕರಣವಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!