ಕಾರ್ಕಳ : ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ದಿಡಿಂಬಿರಿ-ಮುಡಾರುವಿನಲ್ಲಿ ಜ. 13ರಿಂದ 15ರ ತನಕ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಜರಗಲಿದೆ. ಜ. 13ರಂದು ಸಂಜೆ ಶಿಲ್ಪಿಯಿಂದ ಗರ್ಭಗೃಹ ಪರಿಗ್ರಹ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ ನಡೆಯಲಿದೆ.
ಜ. 14 : ಧಾರ್ಮಿಕ ಕಾರ್ಯಕ್ರಮ
ರಾತ್ರಿ ಗಂಟೆ 8ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಉದ್ಘಾಟಿಸಲಿದ್ದಾರೆ. ಮೂಡಬಿದ್ರಿ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಲಿರುವರು. ವಾಗ್ಮಿ ಶ್ರೀಕಾಂತ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಶ್ರೀ ದುರ್ಗಾಪರಮೇಶ್ವರೀ ದೇಗುಲ ಮುಡ್ರಾಲು ಇಲ್ಲಿನ ಆಡಳಿತ ಮೊಕ್ತೇಸರ ಜಯವರ್ಮ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಉದ್ಯಮಿಗಳಾದ ಕರಿಯಣ್ಣ ಶೆಟ್ಟಿ, ಅಣ್ಣಿ ಸಿ. ಶೆಟ್ಟಿ, ಮಹೇಶ್ ಬೈಲೂರು, ಸುನಿಲ್ ಕುಮಾರ್, ಸುನಿಲ್ ವಿ. ಮರಾಠೆ, ಜಗದೀಶ್ ಅಂಚನ್, ಶ್ಯಾಮ ಎನ್. ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಸಾದ್ ಸಿ. ಆಚಾರ್ಯ, ಶೈಲೇಶ್ ವರ್ಮ ಜೈನ್, ಆರ್.ಬಿ. ಜಗದೀಶ್, ಉದಯ ಸಾಲಿಯಾನ್, ಸುಧಾಕರ ಮಡಿವಾಳ್, ಸುಂದರ ಭಂಡಾರಿ, ಪೂವಪ್ಪ ಪರವ, ಮಲ್ಲಿಕಾರ್ಜುನ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ರಾತ್ರಿ ಗಂಟೆ 9:30ರಿಂದ ವಿಠಲ್ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಜರಗಲಿದೆ.
ಜ. 15 : ಧಾರ್ಮಿಕ ಸಭೆ
ರಾತ್ರಿ ಗಂಟೆ 8ರಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿರುವರು. ಉದ್ಯಮಿ ಗಣೇಶ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಹಿರಿಯ ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ಹರಿದಾಸ್ ಭಟ್, ಶಂಕರ ಶೆಟ್ಟಿ, ನಂದಕುಮಾರ್ ಹೆಗ್ಡೆ, ಗೋಪಾಕೃಷ್ಣ ಶೆಟ್ಟಿ, ಭಾಸ್ಕರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ವಸಂತ ಕುಮಾರ್, ಅಶೋಕ್ ಶೆಟ್ಟಿ, ಗೀತಾ ಪಾಟ್ಕರ್, ರವೀಂದ್ರ ಮೊಯ್ಲಿ, ಹರೀಶ್ ಪೂಜಾರಿ, ಸುಧಾಕರ ಸಾಲ್ಯಾನ್, ಸುಂದರ ಬಿ. ಉಪಸ್ಥಿತರಿರುವರು.
ಸನ್ಮಾನ
ಜ್ಯೋತಿಷ್ಯರಾದ ವಾಸುದೇವ ಹೆಬ್ಬಾರ್, ವೇ.ಮೂ. ರಾಮ್ ಭಟ್, ವಾಸ್ತುತಜ್ಞ ಕೃಷ್ಣ ಮೊಯ್ಲಿ, ಉದ್ಯಮಿ ವಸಂತ ಶೆಟ್ಟಿ, ಶಿಲ್ಪಿ ಶಿವಾನಂದ್, ಉದ್ಯಮಿ ಪ್ರದೀಪ್ ಪಾಠಕ್, ವಿಷ್ಣು ಮರಾಠೆ, ಶಿವಣ್ಣ ಪೂಜಾರಿ, ಸುಂದರ, ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 9ರಿಂದ ಸ್ಥಳದ ಕಾರ್ಣಿಕ ಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ ಎಂದು ನೋಣಯ್ಯ ಗುರುಸ್ವಾಮಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



























































