ಕಾರ್ಕಳ : ಅಳಿಯನು ಎಡಕೆನ್ನೆ ಹಾಗೂ ಮರ್ಮಾಂಗಕ್ಕೆ ಕೊಟ್ಟ ಏಟಿಗೆ ಮಾವ ಮೃತಪಟ್ಟ ಘಟನೆ ಕಾರ್ಕಳ ಬಂಗ್ಲೆಗುಡ್ಡೆ ಪರಿಸರದಲ್ಲಿ ನಡೆದಿದೆ. ಬಂಗ್ಲೆಗುಡ್ಡೆ ಹಂಚಿಕಟ್ಟೆ ಬಾಡಿಗೆ ಮನೆಯಲ್ಲಿದ್ದ ಶೇಖ್ ಅಬೂಬಕ್ಕರ್ (57) ಅವರೇ ಸಾವಿಗೀಡಾದ ವ್ಯಕ್ತಿ. ಅಬೂಬಕ್ಕರ್ ಅವರ ಮಗಳ ಗಂಡ ತೌಸಿಫ್ ಡಿ. 31ರಂದು ಮಾವನೊಂದಿಗೆ ಜಗಳಕ್ಕಿಳಿದು ಜಗಳ ತಾರಕಕ್ಕೇರಿ ಎಡಕೆನ್ನೆಗೆ ಹೊಡೆದು, ಮರ್ಮಾಂಗಕ್ಕೆ ಬಲವಾಗಿ ತುಳಿದಿರುತ್ತಾನೆ. ಬಳಿಕ ಅಬೂಬಕ್ಕರ್ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಜ. 1ರಂದು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೌಸಿಫ್ ಇತ್ತೀಚೆಗೆ ಅಂದರೆ ಕೇವಲ 10 ದಿನದ ಹಿಂದೆ ಶೇಖ್ ಅಬೂಬಕ್ಕರ್ ಮಗಳನ್ನು ಮದುವೆಯಾಗಿದ್ದನು.
ಅಳಿಯನ ಪೆಟ್ಟಿಗೆ ಪ್ರಾಣ ಬಿಟ್ಟ ಮಾವ



























































