ಕಾರ್ಕಳ : ಹಿರಿಯಂಗಡಿ ಹಲ್ಲರ ಬಸದಿ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರಿ ಪದ್ಮಾವತಿ ದೇವಿ ಅಮ್ಮನವರ ರಥೋತ್ಸವ ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ನಾಗಕುಮಾರ್ ಇಂದ್ರ ನೇತೃತ್ವದಲ್ಲಿ ಡಿ. 30ರಂದು ಜರಗಿತು. ಅಂದು ಸಂಜೆ 5.30ರಿಂದ ಸಮವಸರಣ ಪೂಜೆ ನಡೆದು, 7.30ರಿಂದ ಹಿರಿಯಂಗಡಿ ರಥ ಬೀದಿಯಲ್ಲಿ ಸಂಭ್ರಮದಿಂದ ರಥೋತ್ಸವ ನೆರವೇರಿತು. ಈ ವೇಳೆ ಬಸದಿಯ ಆಡಳಿತ ಮೊಕ್ತೇಸರ ಕುಕ್ಕುಂದೂರು ಗುಡ್ಡೆಗುತ್ತು ರತ್ನರಾಜ ಮುದ್ಯ, ಆರೂರು ಮಾಗಣೆ ಜೈನ ಬಾಂಧವರು, ಭಕ್ತಾದಿಗಳು ಉಪಸ್ಥಿತರಿದ್ದರು.
ಹಿರಿಯಂಗಡಿ ಬಸದಿ ರಥೋತ್ಸವ



























































