ಕಾರ್ಕಳ : ಹಸಿ ಕಸ-ಒಣ ಕಸ ಪ್ರತ್ಯೇಕಿಸಿ ನೀಡುವಂತೆ ಪುರಸಭೆ ಸೂಚನೆ

ಕಾರ್ಕಳ : ಪುರಸಭಾ ವ್ಯಾಪ್ತಿಯ ಮನೆ, ವಾಣಿಜ್ಯ, ಹೋಟೆಲ್, ಮಾಂಸದ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ 2 ವಿಧಗಳಾಗಿ (ಹಸಿ-ಕಸ ಮತ್ತು ಒಣ-ಕಸ) ಎಂದು ಬೇರ್ಪಡಿಸಿ, ಪುರಸಭಾ ವಾಹನಕ್ಕೆ ಪ್ರತ್ಯೇಕಿಸಿ ನೀಡುವಂತೆ ಪುರಸಭಾ ಪ್ರಕಟನೆ ತಿಳಿಸಿದೆ.

ಅಡಿಗೆ ಮನೆ ತ್ಯಾಜ್ಯ ಅಂದರೆ, ತರಕಾರಿ, ಹಣ್ಣು-ಹಂಪಲು ತ್ಯಾಜ್ಯ, ಇತರೆ ಕೊಳೆಯುವ ವಸ್ತುಗಳು ಮತ್ತು ಒಣ-ಕಸವಾದ ಹಾಲಿನ ಕವರ್, ಕಾಗದ, ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್, ರಟ್ಟು, ಕಬ್ಬಿಣ, ಇತರ ಘನ ವಸ್ತುಗಳನ್ನು ಪತ್ರೇಕಿಸಿ ಪುರಸಭಾ ವಾಹನಕ್ಕೆ ನೀಡಬೇಕು. ಒಣಕಸವನ್ನು ಪ್ರತಿ ಶುಕ್ರವಾರ ಸಂಗ್ರಹಿಸಲಾಗುವುದು ಎಂದು ಪುರಸಭೆ ತಿಳಿಸಿದೆ.

ದಂಡ

ರಸ್ತೆಬದಿ, ಚರಂಡಿ ಮತ್ತು ಖಾಲಿ ಸ್ಥಳಗಳಲ್ಲಿ ಕಸ ಬಿಸಾಡುವುದು ಕಂಡುಬಂದಲ್ಲಿ, ಅಂತಹವರಿಗೆ ಕೋರ್ಟ್‌ ನ ಸೂಚನೆಯಂತೆ 500 ರೂ.ವಿನಿಂದ 5000 ರೂ. ವರೆಗೆ ದಂಡ ವಿಧಿಸಲಾಗುವುದು. ವೈದ್ಯಕೀಯ ತ್ಯಾಜ್ಯವನ್ನು ಪುರಸಭಾ ತ್ಯಾಜ್ಯದಲ್ಲಿ ವಿಲೀನ ಮಾಡದೇ ಪ್ರತ್ಯೇಕವಾಗಿ, ಸ್ವಂತ ಜವಾಬ್ದಾರಿಯಲ್ಲಿ ವಿಲೇ ಮಾಡತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದು ಕಂಡು ಬಂದಲ್ಲಿ ಅಂತಹ ಆಸ್ಪತ್ರೆ, ಕ್ಲೀನಿಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಪ್ರಕಟನೆಯಲ್ಲಿ ತಿಳಿಸಿದೆ.























































































































































error: Content is protected !!
Scroll to Top