ಈ ಸಲ ನವರಾತ್ರಿ ವಿಳಂಬ : 165 ವರ್ಷಗಳ ಬಳಿಕ ಸಂಭವಿಸುತ್ತಿದೆ ಈ ವಿದ್ಯಮಾನ

ಕಾರ್ಕಳ, ಆ. 27: ಹಿಂದುಗಳ ಅತಿದೊಡ್ಡ ಹಬ್ಬವಾಗಿರುವ ನವರಾತ್ರಿ ಈ ವರ್ಷ ತುಸು ತಡವಾಗಿ ಬರಲಿದೆ.

ಹತ್ತು ದಿನಗಳ ದಸರಾ ನಮಗೆ ನಾಡಹಬ್ಬವೂ ಹೌದು. ಇಡೀ ದೇಶ ಈ ಹತ್ತು ದಿನಗಳಲ್ಲಿ ಭಕ್ತಿ ಭಾವಗಳಲ್ಲಿ ಮುಳುಗೇಳುತ್ತದೆ. ಆದರೆ ಈ ಬಾರಿ ಅಂದರೆ 2020 ನವರಾತ್ರಿ  ವಿಳಂಬವಾಗಿ ಬರಲಿದೆ.

ಪ್ರತಿ ವರ್ಷ ನವರಾತ್ರಿ ಪಿತೃಪಕ್ಷ ಮುಗಿದ ಮರುದಿನ ಆರಂಭವಾಗುತ್ತದೆ ಹಾಗೂ ದೇವಿಯ ವಿಗ್ರಹ ಸ್ಥಾಪನೆಯೊಂದಿಗೆ ಬರೋಬ್ಬರಿ 9 ದಿನಗಳವರೆಗೆ ದೇವಿಯನ್ನು ಆರಾಧಿಸಲಾಗುತ್ತದೆ. ಅಂದರೆ ಪಿತೃ ಅಮಾವಾಸ್ಯೆಯ ಮರುದಿನ ಪ್ರತಿಪಾದದೊಂದಿಗೆ ಶರನ್ನವರಾತ್ರಿಯನ್ನು ಆಚರಿಸಲಾಗುತ್ತಿತ್ತು ಆದರೆ ಈ ವರ್ಷ ಅದೇ ಸಮಯಕ್ಕೆ ಶರನ್ನವರಾತ್ರಿಯನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಈ ಬಾರಿ ಪಿತೃ ಪಕ್ಷ ಮುಗಿದ ಬೆನ್ನಲ್ಲೇ ಅಧಿಕಮಾಸ ಆರಂಭವಾಗಲಿದೆ. ಅಧಿಕ ಮಾಸದಿಂದಾಗಿ ಈ ಬಾರಿಯ ಶರನ್ನವರಾತ್ರಿಯು 20 ರಿಂದ 25 ದಿನಗಳವರೆಗೆ ವಿಳಂಬವಾಗಲಿದೆ. ಸೆ.18ರಿಂದ ಅಕ್ಟೋಬರ್‌ 16ವರೆಗೆ ಅಶ್ವಯುಜ ಅಧಿಕ ಮಾಸವಿದೆ. ಅಕ್ಟೋಬರ್‌ 17ಕ್ಕೆ ಶುರುವಾಗಿ 24ರ ವರೆಗೆ ನವರಾತ್ರಿ ಮತ್ತು ಅಕ್ಟೋಬರ್‌ 25ರಂದು ವಿಜಯದಶಮಿ ಆಚರಿಸಲಾಗುವುದು.  ಸುಮಾರು 165 ವರ್ಷಗಳ ಹಿಂದೆ ಒಮ್ಮೆ ಹೀಗೆ ಪಿತೃಪಕ್ಷ ಮುಗಿದು ಒಂದು  ತಿಂಗಳ ನಂತರ ಶರನ್ನವರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.

































































































error: Content is protected !!
Scroll to Top