ಮಹೇಶ್ ಭಟ್ ರ ಸಡಕ್ -2 ಟ್ರೇಲರ್ ತಿರಸ್ಕರಿಸಿದ ಜನತೆ

ಏಳಿಂಜೆ ನಾಗೇಶ್

ಆ. 28 ರಂದು ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಪ್ರಸಾರ ಆರಂಭಿಸಲಿದ್ದ ಮುಕೇಶ್ ಭಟ್- ಮಹೇಶ್ ಭಟ್ರ ‘ ಸಡಕ್ 2’ ಚಿತ್ರದ ಟ್ರೇಲರ್  ಆ.12ರಂದು  ಬಿಡುಗಡೆಯಾಗಿತ್ತು.ಮಹೇಶ್ ಭಟ್ ರ ಮೇಲೆ ಸಿನಿ‌ ಪ್ರೇಕ್ಷಕರಿಗಿರುವ ಕೋಪ ಈಗ ಬೆಳಕಿಗೆ ಬಂದಿದೆ.24 ಗಂಟೆಯ ಮೊದಲೇ ಯೂಟ್ಯೂಬ್‌ನಲ್ಲಿ ಈ ಟ್ರೇಲರ್ 5.1 ಮಿಲಿಯನ್ ಡಿಸ್ ಲೈಕ್ ಪಡೆದಿದೆ.ಇದು ವಿಶ್ವ ಸಿನಿ ಇತಿಹಾಸದಲ್ಲೇ ಅತಿ ಹೆಚ್ಚು  ದಾಖಲೆಯಾಗಿದೆ.

ಸಂಜಯ್ ದತ್ತ್,ಆಲಿಯಾ ಭಟ್ ನಟನೆಯ ಈ ಚಿತ್ರದಲ್ಲಿ ಸಂಜಯ್ ದತ್ತ್ ರಂತಹ ಪ್ರತಿಭಾಶಾಲಿ ನಟ ನಟಿಸಬಾರದಿತ್ತು ಎಂಬ ಕಮೆಂಟ್ ಗಳೇ ಹೆಚ್ಚು ಕಾಣಿಸಿಕೊಂಡಿರುವುದು ಮತ್ತೊಂದು ದಾಖಲೆಯಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ  ಪ್ರಕರಣದಲ್ಲಿ ಮಹೇಶ್ ಭಟ್ ವಿಚಾರಣೆಗೊಳಪಟ್ಟಿರುವುದು, ರಿಯಾ ಚಕ್ರವರ್ತಿಗೆ ಮಹೇಶ್ ಹತ್ತಿರವಾಗಿರುವುದು ಮತ್ತು ಒಟ್ಟು ಬಾಲಿವುಡ್ ಮಂದಿಯೇ ಸುಶಾಂತ್ ಪರವಾಗಿ ಬಾಯಿ ಬಿಡದಿರುವ ಆಕ್ರೋಶವನ್ನು ಸಿನಿ‌ಪ್ರೇಕ್ಷಕರು ಈ ಮೂಲಕ ಹೊರ ಹಾಕಿದ್ದಾರೆ ಎನ್ನಲಡ್ಡಿಯಿಲ್ಲ.ಇತ್ತೀಚೆಗೆ ಬಿಡುಗಡೆಯಾದ ಸುಶಾಂತ್ ನಟಿಸಿದ ‘ದಿಲ್ ಬೆಚಾರ’ ದ ಟ್ರೇಲರ್ ದಾಖಲೆ ಪ್ರಮಾಣದಲ್ಲಿ ವೀಕ್ಷಿಸಲ್ಪಟ್ಟಿತ್ತು.

ಮೊನ್ನೆ ಮೊನ್ನೆ ತಾನೆ ಕರೀನಾ ಕಪೂರ್ ‌ಮಾಧ್ಯಮದವರ ಜೊತೆ ಮಾತನಾಡುತ್ತಾ,’ ನಾವು ಯಾರು ಕೂಡಾ ನಿಮ್ಮನ್ನು‌ ನಮ್ಮ ಸಿನಿಮಾ ವೀಕ್ಷಿಸುವಂತೆ ಒತ್ತಾಯಿಸುವುದಿಲ್ಲ’ ಎಂಬುದಾಗಿ ಅಹಂಕಾರದ ಮಾತುಗಳನ್ನಾಡಿದ್ದಾರೆ.ಬಹುಶಃ ಆಕೆಯ ಚಿತ್ರ ಜೀವನ ಹೇಗೂ ವಿದಾಯದತ್ತ ಸಾಗುತ್ತಿದೆ.ಆ ಧೈರ್ಯದಿಂದಲೂ ಆಕೆ ಬಿಂದಾಸ್ ಆಗಿ ಹೇಳಿರಬಹುದು.ಅಂದ ಹಾಗೆ ಆಕೆ ಈಗ ಎರಡನೇ ಮಗುವಿನ ತಾಯಿಯಾಗುತ್ತಿದ್ದಾಳೆ.error: Content is protected !!
Scroll to Top