ಕಾರ್ಕಳ : ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿರುವ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಸುಮಾರು 18 ಮಂದಿ ಆಶಾ ಕಾರ್ಯಕರ್ತರಿಗೆ ಜೇಸಿಐ ಕಾರ್ಕಳ, ಜೇಸಿರೇಟ್ ವಿಭಾಗ ಕಾರ್ಕಳ ಇದರ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು. ನಿಟ್ಟೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ. 11ರಂದು ನಡೆದ ಕಾರ್ಯಕ್ರಮದಲ್ಲಿ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಅವರು ಕಿಟ್ ವಿತರಣೆ ಮಾಡಿದರು. ಜೇಸಿಐನ ಅಧ್ಯಕ್ಷ ದಿವಾಕರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪಂಚಾಯತ್ ಉಫಾದ್ಯಕ್ಷ ಗೋಪಾಲ ಶೆಟ್ಟಿ, ಪಂಚಾಯತ್ ಅಭಿವೃಧಿ ಅಧಿಕಾರಿ ಶೇಖರ್ ಪೂಜಾರಿ, ಜೇಸಿರೇಟ್ ಅಧ್ಯಕ್ಷೆ ಚಂದ್ರಿಕಾ ದಿವಾಕರ್, ಪೂರ್ವ ವಲಯ ಅಧಿಕಾರಿಗಳಾದ ಪ್ರದೀಪ್ ನಾಯಕ್, ಪದ್ಮಪ್ರಸಾದ್ ಜೈನ್, ಪೂರ್ವ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್, ಕಾರ್ಯದರ್ಶಿ ದಿನೇಶ್ ನಾಯಕ್, ಪಂಚಾಯತ್ ಸದಸ್ಯರಾದ ಸುಭಾಶ್ಚಂದ್ರ ಹೆಗ್ಡೆ, ಸುರೇಶ್ ಶೆಟ್ಟಿ, ಜೇಸಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.