ಒಂದು ವಾರ ಶಿರಸಿ ಮಾರಿಕಾಂಬಾ ದೇವಾಲಯ ಬಂದ್

ಶಿರಸಿ : ಲಾಕ್‌ಡೌನ್ ಸಡಿಲಿಕೆಯ ನಂತರ ಬಾಗಿಲು ತೆರೆದಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಾಲಯವು ಭಾನುವಾರದಿಂದ ಮತ್ತೆ ಒಂದು ವಾರದ ಕಾಲಬಂದ್‌ ಆಗಲಿದೆ.ಈ ಅವಧಿಯಲ್ಲಿ  ದೇವಿಯ ದರ್ಶನ ಮಾಡಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ವೈರಸ್ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಾಲಯ ಪಕ್ಕದ ಮನೆಯ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಕಾರಣ, ಮುನ್ನೆಚ್ಚರಿಕೆಯಾಗಿ ದೇವಸ್ಥಾನ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ದೇವಸ್ಥಾನ ಸಿಬ್ಬಂದಿಗೆ ರಜೆ ನೀಡಲಾಗಿದ್ದು, ದೇವಿಗೆ ನಿತ್ಯದ ಪೂಜೆ ನಡೆಯುತ್ತದೆ. ಆದರೆ, ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ತಿಳಿಸಿದ್ದಾರೆ.


error: Content is protected !!
Scroll to Top