• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ – ಚಾಲಕ ಅಪಾಯದಿಂದ ಪಾರು

ಕಾರ್ಕಳ : ವಿದ್ಯುತ್‌ ಕಂಬಕ್ಕೆ ಕಾರೊಂದು ಡಿಕ್ಕಿಯಾಗಿ ಚಾಲಕ ಪವಾಡ ಸದೃಶ್ಯವಾಗಿ ಪಾರಾದ ಘಟನೆ ಜೋಡುರಸ್ತೆಯಲ್ಲಿ ಫೆ. 23ರಂದು ನಡೆದಿದೆ. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಸಾಗುತ್ತಿದ್ದ ಮಾರುತಿ ಇಕೋ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಏರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಿದ್ಯುತ್‌ ಕಂಬ ಕಾರಿಗೆ ವಾಲಿದ್ದು, ಕಾರಿನ ಮುಂಭಾಹ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರಿನ ಟಯರ್‌ಗೆ ಕಲ್ಲು ಬಡಿದ ಪರಿಣಾಮ ಸ್ಫೋಟಗೊಂಡು ಅಪಘಾತಕ್ಕೀಡಾಗಿದೆ ಎನ್ನಲಾಗುತ್ತಿದೆ.

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ – ಚಾಲಕ ಅಪಾಯದಿಂದ ಪಾರು Read More »

ಸ್ಕೂಟಿಗೆ ಡಿಕ್ಕಿ – ಬುಲೆಟ್‌ ಸವಾರ ಪರಾರಿ

ಕಾರ್ಕಳ : ಸ್ಕೂಟಿಗೆ ಡಿಕ್ಕಿ ಹೊಡೆದು ಬುಲೆಟ್‌ ಸವಾರ ಪರಾರಿಯಾದ ಘಟನೆ ಫೆ. 9ರಂದು ಹೆಬ್ರಿಯಲ್ಲಿ ನಡೆದಿದೆ. ಮಡಾಮಕ್ಕಿ ಗ್ರಾಮದ ಉಮೇಶ್‌ ಶೆಟ್ಟಿಯವರು ತಮ್ಮ ಸ್ಕೂಟಿಯಲ್ಲಿ ಬಾವ ಸಂತೋಷ್‌ ಶೆಟ್ಟಿಯವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿ ಕಡೆಗೆ ಸಾಗುತ್ತಿದ್ದಾಗ ಮಾಂಡಿ ಮೂರುಕೈ ರಸ್ತೆಯ ಹಾಲೆಕೊಡ್ಲು ಎಂಬಲ್ಲಿ ಹೆಬ್ರಿ ಕಡೆಯಿಂದ ಬರುತ್ತಿದ್ದ ಬುಲೆಟ್‌ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟಿಯಲ್ಲಿದ್ದ ಸಹಸವಾರ ಸಂತೋಷ್‌ ಶೆಟ್ಟಿ ಗಾಯಗೊಂಡಿದ್ದಾರೆ. ಅಪಘಾತಗೊಳಿಸಿದ ಬುಲೆಟ್‌ ಸವಾರ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳುವಿಗೆ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ

ಸ್ಕೂಟಿಗೆ ಡಿಕ್ಕಿ – ಬುಲೆಟ್‌ ಸವಾರ ಪರಾರಿ Read More »

ಕಾರುಗಳ ನಡುವೆ ಡಿಕ್ಕಿ

ಕಾರ್ಕಳ : ದೂಪದಕಟ್ಟೆಯಲ್ಲಿ ಫೆ. 6ರಂದು ಕಾರುಗಳ ನಡುವೆ ಅಪಘಾತ ಸಂಭವಿಸಿದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿಯ ದಿನೇಶ್‌ ಗೌಡ ಎಂಬವರು ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಹೆಂಡತಿ ಲೀಲಾವತಿ, ಮಗಳು ವಿನುಶ್ರೀ, ಸಂಬಂಧಿ ದಯಾನಂದ ಮತ್ತು ಚಾಲಕನಾಗಿ ತನ್ನ ಅಳಿಯ ಅಖಿಲೇಶ್ ಎಂಬುವವರೊಂದಿಗೆ ನಿಟ್ಟೆಯಿಂದ ಬೆಳ್ತಂಗಡಿಗೆ ಹೋಗುತ್ತಿರುವಾಗ ನಿಟ್ಟೆ ಗ್ರಾಮದ ದೂಪದಕಟ್ಟೆ ಜಂಕ್ಷನ್ ಬಳಿ ತಲುಪುವಾಗ ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಜಂಕ್ಷನ್ ಕಡೆಗೆ ವಿಶ್ವಾಸ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ

ಕಾರುಗಳ ನಡುವೆ ಡಿಕ್ಕಿ Read More »

ಬಸ್‌ನಿಂದ ಇಳಿಯುವ ಮೊದಲೇ ಬಸ್‌ ಚಲಾವಣೆ – ಪ್ರಯಾಣಿಕನಿಗೆ ಗಾಯ

ಕಾರ್ಕಳ : ಬಸ್‌ನಿಂದ ಇಳಿಯುವ ಮೊದಲೇ ಬಸ್‌ ಚಲಾಯಿಸಿದ ಪರಿಣಾಮ ಪ್ರಯಾಣಿಕ ಬಿದ್ದು ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಜ. 14ರಂದು ಮುರತ್ತಂಗಡಿಯಲ್ಲಿ ನಡೆದಿದೆ.ನಿರಂಜನ ಆಳ್ವ ಎಂಬವರು ಮೂಡಬಿದಿರೆಯಿಂದ ಸಾಣೂರು ಗ್ರಾಮದ ಮುರತ್ತಂಗಡಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದು, ಮುರತ್ತಂಗಡಿ ಬಸ್‌ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿರುತ್ತಾರೆ. ಈ ವೇಳೆ ಅವರು ಬಸ್‌ ಇಳಿಯಲು ಹೋದಾಗ ಬಸ್‌ ಕಂಡಕ್ಟರ್‌ ಒಮ್ಮೆಲೆ ಬಸ್ಸನ್ನು ಚಲಾಯಿಸುವಂತೆ ಸೂಚನೆ ನೀಡಿದ್ದು, ಚಾಲಕ ನಿರ್ಲಕ್ಷತನದಿಂದ ಬಸ್‌ ಚಲಾಯಿಸಿದ ಪರಿಣಾಮ ನಿರಂಜನ ಆಳ್ವ ಅವರು ಆಯತಪ್ಪಿ ಬಸ್‌ನಿಂದ

ಬಸ್‌ನಿಂದ ಇಳಿಯುವ ಮೊದಲೇ ಬಸ್‌ ಚಲಾವಣೆ – ಪ್ರಯಾಣಿಕನಿಗೆ ಗಾಯ Read More »

ನಿಟ್ಟೆಯಲ್ಲಿ ಸರಣಿ ಅಪಘಾತ : ಮೊಟ್ಟೆ ಲಾರಿ ಪಲ್ಟಿ‌ – ಕಾರುಗಳು ಜಖಂ

ಕಾರ್ಕಳ : ನಿಟ್ಟೆಯಲ್ಲಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಪಾದಚಾರಿಯೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಡಿ.29ರ ಬೆಳಿಗ್ಗೆ ನಡೆದಿದೆ.ನಿಟ್ಟೆ ಗ್ರಾಮ ಪಂಚಾಯತ್‌ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ಸಾಗತ್ತಿದ್ದ ಮೊಟ್ಟೆ ಲಾರಿ ಮತ್ತು ಬೆಳ್ಮಣ್‌ ಕಡೆಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆಯೇ ಲಾರಿ ಪಲ್ಟಿಯಾಗಿದ್ದು ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಲಾರಿಯ ಹಿಂದುಗಡೆ ಬರುತ್ತಿದ್ದ ಒಂದು

ನಿಟ್ಟೆಯಲ್ಲಿ ಸರಣಿ ಅಪಘಾತ : ಮೊಟ್ಟೆ ಲಾರಿ ಪಲ್ಟಿ‌ – ಕಾರುಗಳು ಜಖಂ Read More »

ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ

ಕಾರ್ಕಳ : ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾದ ಘಟನೆ ನ. 19ರಂದು ಬಂಡಿಮಠದಲ್ಲಿ ಸಂಭವಿಸಿದೆ. ಕಮಲವ್ವ ಗಂಗಪ್ಪಳ (̈69) ಎಂಬವರು ಬೆಳಿಗ್ಗೆ ಹಾಲು ಡೈರಿಯಿಂದ ಹಾಲನ್ನು ಖರೀದಿ ಮಾಡಿಕೊಂಡು ಬಂಡೀಮಠ ಮೂಡು ಗಣಪತಿ ಸಭಾಭವನದ ಎದುರು ರಸ್ತೆ ದಾಟುತ್ತಿದ್ದ ವೇಳೆ ಕಾರ್ಕಳ ಪೇಟೆಯಿಂದ ಬಂಗ್ಲೆಗುಡ್ಡೆ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಮಲವ್ವ ತೀವ್ರವಾಗಿ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್

ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ Read More »

ಬಸ್‌ಗೆ ಓಮ್ನಿ ಕಾರು ಡಿಕ್ಕಿ – ಇಬ್ಬರು ಆಸ್ಪತ್ರೆ ದಾಖಲು

ಕಾರ್ಕಳ : ಬಸ್‌ಗೆ ಓಮ್ಮಿ ಕಾರು ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆ ದಾಖಲಾದ ಘಟನೆ ಅ. 29 ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಬ್ಬಿರ್‌ ಅಹ್ಮದ್‌ ಎಂಬವರು ಕೇರಳದಿಂದ ಬಸ್‌ನ್ನು ಖರೀದಿ ಮಾಡಿ ಶಿಕಾರಿಪುರಕ್ಕೆ ಕಾರ್ಕಳ –ಹೆಬ್ರಿ ಮಾರ್ಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಂಜೆ 7 ಗಂಟೆಗೆ ವರಂಗ ಪೇಟೆಯಿಂದ ಹೆಬ್ರಿ ಕಡೆ ಸಾಗುತ್ತಿದ್ದಾಗ ಎದುರಿನಲ್ಲಿ ಹೆಬ್ರಿ ಕಡೆಯಿಂದ ಬರತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಓಮ್ನಿ ಕಾರಿನ ಚಾಲಕ ಹಾಗೂ ಅದರಲ್ಲಿದ್ದ

ಬಸ್‌ಗೆ ಓಮ್ನಿ ಕಾರು ಡಿಕ್ಕಿ – ಇಬ್ಬರು ಆಸ್ಪತ್ರೆ ದಾಖಲು Read More »

ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿ – ಚಿಕಿತ್ಸೆ ಫಲಿಸದೆ ಸವಾರ ಸಾವು

ಕಾರ್ಕಳ : ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿಯಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೆ ಸಾವನಪ್ಪಿದ ಘಟನೆ ಅ. 27ರಂದು ಮುದ್ರಾಡಿಯಲ್ಲಿ ಸಂಭವಿಸಿದೆ. ಹರೀಶ್‌ (45) ಮೃತ ವ್ಯಕ್ತಿ. ಅವರು ಅ. 25ರಂದು ಬೈಕ್‌ನಲ್ಲಿ ಬಚ್ಚಪ್ಪು ಕಡೆಯಿಂದ ಮುದ್ರಾಡಿ ಕಡೆಗೆ ಸಾಗುತ್ತಿದ್ದಾಗ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಹೋಗಿ ಮುದ್ರಾಡಿ ರಿಕ್ಷಾ ನಿಲ್ದಾಣದ ಮುಂಭಾಗ ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ತಲೆಯ ಹಿಂಭಾಗಕ್ಕೆ ಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಹೆಬ್ರಿ ಸಮುದಾಯ

ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿ – ಚಿಕಿತ್ಸೆ ಫಲಿಸದೆ ಸವಾರ ಸಾವು Read More »

ನಿಲ್ಲಿಸಿದ್ದ ಲಾರಿಗೆ ಬೈಕ್‌ ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ನಿಲ್ಲಿಸಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ ಸವಾರ ಗಾಯಗೊಂಡಿರುವ ಘಟನೆ ಅ. 16ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಬಳಿ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಯಾವುದೇ ಮುನ್ಸೂಚನಾ ಫಲಕ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ವಿಜಯ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ವಿಜಯ ಅವರು ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ನಿಲ್ಲಿಸಿದ್ದ ಲಾರಿಗೆ ಬೈಕ್‌ ಡಿಕ್ಕಿ – ಸವಾರನಿಗೆ ಗಾಯ Read More »

ಕಾರು ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಆಸ್ಪತ್ರೆ ದಾಖಲಾದ ಘಟನೆ ಸೆ. 16ರಂದು ನೀರೆ ಗ್ರಾಮದಲ್ಲಿ ಸಂಭವಿಸಿದೆ. ಬೊಗ್ಗು ಎಂಬವರು ನೀರೆ ಗ್ರಾಮದ ಪಳ್ಳಿ ಕ್ರಾಸ್‌ನಲ್ಲಿ ಬೈಲೂರು ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಲೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಬೊಗ್ಗು ಅವರು ಗಾಯಗೊಂಡಿದ್ದು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯರು ಹಾಗೂ ಗುದ್ದಿದ ಕಾರಿನ ಚಾಲಕ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ

ಕಾರು ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು Read More »

error: Content is protected !!
Scroll to Top