• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕರಾವಳಿ

ತೋಟದಿಂದ ಅಡಿಕೆ ಕಳ್ಳತನ – ತುಂಬೆಹಿತ್ಲು ರಕ್ತೇಶ್ವರಿ ದೈವದ ಮೊರೆ ಹೋದ ಮಾಲೀಕ

ವಾರ್ಷಿಕ ನೇಮೋತ್ಸವ ಸಂದರ್ಭ ದೈವದ ಎದುರಲ್ಲೇ ತಪ್ಪೊಪ್ಪಿಕೊಂಡ ಕಳ್ಳರು ಕಾರ್ಕಳ : ತೋಟದಿಂದ ಅಡಿಕೆ ಕಳ್ಳತನಗೈದ ಕಳ್ಳರು ವರ್ಷದೊಳಗಡೆ ದೈವದ ನೇಮೋತ್ಸವ ಸಂದರ್ಭ ತಪ್ಪೊಪ್ಪಿಕೊಂಡ ಘಟನೆ ಹಿರ್ಗಾನ ಗ್ರಾಮದ ತುಂಬೆಹಿತ್ಲುವಿನಲ್ಲಿ ನಡೆದಿದೆ. ಹಿರ್ಗಾನ ಗ್ರಾಮದ ತುಂಬೆಹಿತ್ಲು ಸತೀಶ್‌ ಚೌಟ ಎಂಬವರಿಗೆ ಸೇರಿದ ತೋಟದಿಂದ ವರ್ಷದ ಹಿಂದೆ ಅಡಿಕೆ ಕಳ್ಳತನವಾಗಿತ್ತು. ಅಡಿಕೆ ಕಳ್ಳತನವಾಗಿರುವ ಕುರಿತು ಸತೀಶ್‌ ಅವರು ತುಂಬೆಹಿತ್ಲು ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ ನೇಮೋತ್ಸವ ಸಂದರ್ಭದಲ್ಲಿ ಕಳ್ಳರ ಪತ್ತೆಗಾಗಿ ನಿವೇದಿಸಿಕೊಂಡಿದ್ದರು.ಮಾ. 14ರಂದು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ ನೇಮೋತ್ಸವ […]

ತೋಟದಿಂದ ಅಡಿಕೆ ಕಳ್ಳತನ – ತುಂಬೆಹಿತ್ಲು ರಕ್ತೇಶ್ವರಿ ದೈವದ ಮೊರೆ ಹೋದ ಮಾಲೀಕ Read More »

ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಭ್ರಮದ ಈದುಲ್‌ ಫಿತ್ರ್

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಕಾರ್ಕಳ ಜಾಮೀಯಾ ಮಸೀದಿ, ಹಂಚಿಕಟ್ಟೆ ಆಯಿಷಾ, ಬಜಗೋಳಿ, ಮದೀನಾ, ಅತ್ತೂರು ನೂರ್‌ ಮಸೀದಿ, ಬಂಗ್ಲೆಗುಡ್ಡೆ ಸಲ್ಮಾನ್‌ ಮಸೀದಿ, ಕುಕ್ಕುಂದೂರು, ಕಜೆ, ಬೈಲೂರು, ಎಣ್ಣೆಹೊಳೆ, ಸಾಣೂರು ಸೇರಿದಂತೆ ಕಾರ್ಕಳ ತಾಲೂಕ ಹಾಗೂ ಹೆಬ್ರಿ ತಾಲೂಕಿನ ಮಸೀದಿಯಲ್ಲಿ ಈದ್‌ ಹಬ್ಬ ಆಚರಿಸಿದರು. ಜಾಮೀಯಾ ಮಸೀದಿಯಲ್ಲಿ ಬೆಳಿಗ್ಗೆ ಸಮೂಹ ನಮಾಜ್‌ ನೆರವೇರಿಸಿ, ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಮುಸ್ಲಿಂ

ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಭ್ರಮದ ಈದುಲ್‌ ಫಿತ್ರ್ Read More »

ಎ. 14 : ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಲೋಕಾರ್ಪಣೆ

ಡಾ. ಎಂ. ವೀರಪ್ಪ ಮೊಯ್ಲಿ ಉದ್ಘಾಟನೆ – ಶಾಸಕ ಸುನಿಲ್‌ ಕುಮಾರ್‌ ಅಧ್ಯಕ್ಷತೆ ಅಜೆಕಾರ್‌ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ – ಟ್ರಸ್ಟ್‌ ಘೋಷಣೆ ಕಾರ್ಕಳ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಅಜೆಕಾರು ಪದ್ಮನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎ. 14ರಂದು ಉದ್ಘಾಟನೆಗೊಳ್ಳಲಿದೆ.ಕಳೆದ 15 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದರೊಂದಿಗೆ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನಗಳನ್ನು ನೀಡುತ್ತಾ ಬಂದಿರುವ ಟ್ರಸ್ಟ್‌ ವತಿಯಿಂದ ಅಜೆಕಾರು ಪದ್ಮನಗರದಲ್ಲಿ 4ನೇ ಕ್ಯಾಂಪಸ್ ನಿರ್ಮಾಣಗೊಳ್ಳುತ್ತಿದೆ.

ಎ. 14 : ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಲೋಕಾರ್ಪಣೆ Read More »

ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಯಾರಂಭ

ಮರ್ಣೆ ಪಂಚಾಯತ್‌ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಾರ್ಕಳ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ (ರಿ.) ಇದರ ಐದನೇ ಅಂಗಸಂಸ್ಥೆ ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪದ್ಮನಗರದಲ್ಲಿ ಕಾರ್ಯಾರಂಭಗೊಳ್ಳಲಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಗೊಳ್ಳುತ್ತಿದ್ದು, ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರದಿಂದ ಅನುಮೋದನೆ ಪಡೆದಿರುತ್ತದೆ.ಅಜೆಕಾರಿನ ಪದ್ಮನಗರದಲ್ಲಿ ಟ್ರಸ್ಟ್‌ನ 4ನೇ ಕ್ಯಾಂಪಸ್ ನಿರ್ಮಾಣಗೊಂಡಿದ್ದು, ಟ್ರಸ್ಟಿನ ಸಮಾಜಸೇವಾ ಮತ್ತು ಶೈಕ್ಷಣಿಕ ಕಾಳಜಿಯ ಭಾಗವಾಗಿ ಅಜೆಕಾರಿನ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಉಚಿತ ಶಿಕ್ಷಣ

ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಯಾರಂಭ Read More »

ಈದುಲ್‌ ಫಿತ್ರ್ : ಮಾ. 20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ

ಉಡುಪಿ : ಚಂದ್ರ ದರ್ಶನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಹಬ್ಬವು ಆಚರಿಸುವುದರಿಂದ ಜಿಲ್ಲೆಯಾದ್ಯಂತ ಮಾ. 20ರ ಶುಕ್ರವಾರ ಸಾರ್ವತ್ರಿಕ ರಜೆ ಸಾರಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುರುವಾರ ಯುಗಾದಿ ರಜೆಯಿದ್ದು, ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ಶುಕ್ರವಾರವೂ ಶಾಲಾ ಕಾಲೇಜು, ಸರಕಾರಿ ಕಚೇರಿಗಳಿಗೆ ರಜೆಯಿರಲಿದೆ.

ಈದುಲ್‌ ಫಿತ್ರ್ : ಮಾ. 20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ Read More »

ದಾಖಲಾತಿ ಆಂದೋಲನ ಕೈಗೊಳ್ಳುವಂತೆ ಎಸ್‌ಡಿಎಂಸಿ ಸದಸ್ಯರಲ್ಲಿ ಶಿಕ್ಷಣ ಸಚಿವರ ಮನವಿ

ಬೆಂಗಳೂರು : ಸರಕಾರಿ ಶಾಲೆಗಳ ದಾಖಲಾತಿ ವೃದ್ಧಿಸುವ ನಿಟ್ಟಿನಲ್ಲಿ ಆಂದೋಲನ ಕೈಗೊಳ್ಳುವಂತೆ ಶಿಕ್ಷಣ ಸಚಿವ ಎಸ್. ಮಧು‌ ಬಂಗಾರಪ್ಪ ಅವರು ಎಸ್‌ಡಿಎಂಸಿ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶೈಕ್ಷಣಿಕ ಪ್ರಗತಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ. ಸುಧಾರಣಾ ಕ್ರಮಗಳುವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಮುಖವಾಗಿ ಮೂಲಭೂತ ಸೌಕರ್ಯಗಳ ವಿಸ್ತರಣೆ, ಶಿಕ್ಷಕರ ಮತ್ತು

ದಾಖಲಾತಿ ಆಂದೋಲನ ಕೈಗೊಳ್ಳುವಂತೆ ಎಸ್‌ಡಿಎಂಸಿ ಸದಸ್ಯರಲ್ಲಿ ಶಿಕ್ಷಣ ಸಚಿವರ ಮನವಿ Read More »

ಬೇಡಿಕೆಗೆ ಅನುಗುಣವಾಗಿ ಅನಿಲ ಪೂರೈಸಿ – ಗ್ಯಾಸ್‌ ಏಜೆನ್ಸಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ : ಯುದ್ಧ ಸನ್ನಿವೇಶದ ಹಿನ್ನೆಲೆ ಅನಿಲ ಕೊರತೆಯಾಗಲಿದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರ್ಯಾಸ್ ಆಗುತ್ತಿದೆ. ಆಸ್ಪತ್ರೆ, ವಸತಿ ನಿಲಯ, ಗೃಹಬಳಕೆ, ಅತಿ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.ಅವರು ಮಾ. 12ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಮತ್ತು ವಾಣಿಜ್ಯ

ಬೇಡಿಕೆಗೆ ಅನುಗುಣವಾಗಿ ಅನಿಲ ಪೂರೈಸಿ – ಗ್ಯಾಸ್‌ ಏಜೆನ್ಸಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ Read More »

ಇಂಡಿಯನ್‌ ಯೂತ್‌ ಸ್ಪೋರ್ಟ್ಸ್‌ ಉಪಾಧ್ಯಕ್ಷರಿಂದ ಯೋಗ ಗುರು ನರೇಂದ್ರ ಕಾಮತ್‌ ಅವರಿಗೆ ಅಭಿನಂದನೆ

ಕಾರ್ಕಳ : ಇಂಡಿಯನ್‌ ಯೂತ್‌ ಸ್ಪೋರ್ಟ್ಸ್‌ ಉಪಾಧ್ಯಕ್ಷ ಡಾ. ಜಿ. ಪ್ರವೀಣ್‌ ಶೆಟ್ಟಿ ಅವರು ಯೋಗಗುರು ನರೇಂದ್ರ ಕಾಮತ್‌ ಅವರನ್ನು ಅಭಿನಂದಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟುವಿನಲ್ಲಿ ಶಿಕ್ಷಕರಾಗಿದ್ದ ನರೇಂದ್ರ ಕಾಮತ್‌ ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ನೀಡಿರುವ ನರೇಂದ್ರ ಕಾಮತ್‌ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ಪ್ರವೀಣ್‌ ಶೆಟ್ಟಿ ಹಾಗೂ ವಿಜೇಂದ್ರ ಪ್ರಭು ಅವರು ಕಾಮತ್ ದಂಪತಿಯನ್ನು ಸನ್ಮಾನಿಸಿದರು.

ಇಂಡಿಯನ್‌ ಯೂತ್‌ ಸ್ಪೋರ್ಟ್ಸ್‌ ಉಪಾಧ್ಯಕ್ಷರಿಂದ ಯೋಗ ಗುರು ನರೇಂದ್ರ ಕಾಮತ್‌ ಅವರಿಗೆ ಅಭಿನಂದನೆ Read More »

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸಾಲ್ಮರ ಜಾಮೀಯಾ ಮಸೀದಿಯ ಶಾದಿ‌ ಮಹಲ್ ಸಭಾಂಗಣದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ನಡೆಯಿತು.ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲ ಮೌಲಾನ ಅಹ್ಮದ್ ಶರೀಫ್‌ ಮಾತನಾಡಿ, ಅನೇಕ ಸಂಶೋಧಕರು, ವಿಜ್ಞಾನಿಗಳು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಮನಃಶಾಂತಿಗಾಗಿ ಧರ್ಮದ ಪಾಲನೆಗೆ ಮೊರೆ ಹೋಗುತ್ತಾರೆ. ನಾವೆಲ್ಲರೂ ನಮ್ಮ ನಮ್ಮ ಧರ್ಮ ಪಾಲಿಸುತ್ತಾ ಶಾಂತಿ ಸೌಹಾರ್ದತೆಯಿಂದಿರಬೇಕೆಂದರು.ನಕ್ರೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಲೂಯಿಸ್ ಡೇಸಾ ಮಾತನಾಡಿ, ನಾವೆಲ್ಲರೂ ದೇವರ ಮಕ್ಕಳು, ಜಾತಿ, ಧರ್ಮಗಳ

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ Read More »

ಮಾ. 10 : ನಾಸಿರ್‌ ಹುಸೇನ್‌ ಅವರಿಗೆ ಶ್ರದ್ಧಾಂಜಲಿ ಸಭೆ

ಕಾರ್ಕಳ : ಜೆಸಿಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ನಿಧನರಾದ ಜನಸ್ನೇಹಿ ಪೊಲೀಸ್ ಅಧಿಕಾರಿ ನಾಸಿರ್ ಹುಸೇನ್ ಅವರಿಗೆ ಮಾ. 10ರಂದು ಬೆಳಿಗ್ಗೆ 11 ಗಂಟೆಗೆ ಕಿಸಾನ್‌ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಈ ಒಂದು ಸಭೆಯಲ್ಲಿ ನಾಸಿರ್‌ ಅವರ ಸ್ನೇಹಿತರು, ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ. 10 : ನಾಸಿರ್‌ ಹುಸೇನ್‌ ಅವರಿಗೆ ಶ್ರದ್ಧಾಂಜಲಿ ಸಭೆ Read More »

error: Content is protected !!
Scroll to Top