Author name: newskarkala desk

ಮುಂದಿನ ಒಂದು ವಾರ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಉಡುಪಿ : ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 1 ವಾರ ಅಂದರೆ ಜೂನ್ 30 ರಿಂದ ಜುಲೈ 6 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಜಿಲ್ಲೆಯಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಮಳೆ,

ಮುಂದಿನ ಒಂದು ವಾರ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ Read More »

ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ : ಡಿಸಿ ಸ್ವರೂಪ

ಪ್ರಯಾಣಿಕರು ಕಸ, ನೀರಿನ ಬಾಟಲ್‌ ಎಲ್ಲೆಂದರಲ್ಲಿ ಎಸೆಯಬಾರದು ಉಡುಪಿ : ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವುದರ ಜೊತೆಗೆ ಸರಕು ಸಾಗಣೆ ವಾಹನಗಳಿಗೆ 60 ಕಿ.ಮೀ. ಪ್ರತಿ ಗಂಟೆಗೆ ವೇಗದ ಮಿತಿ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜೂ. 29ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ

ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ : ಡಿಸಿ ಸ್ವರೂಪ Read More »

ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಗೆ NABH ಮಾನ್ಯತೆ

ಉಡುಪಿ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಧೀನದಲ್ಲಿರುವ ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಮಾನ್ಯತಾ ಮಂಡಳಿ (NABH) ಯಿಂದ ಮಾನ್ಯತೆ ಪಡೆದಿದೆ. ಆಸ್ಪತ್ರೆಯು NABH ಆಸ್ಪತ್ರೆಗಳ ಮಾನ್ಯತಾ ಮಾನದಂಡಗಳ 6ನೇ ಆವೃತ್ತಿಯ ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸಿರುವುದಾಗಿ ದೃಢೀಕರಿಸಲಾಗಿದೆ. ಈ ಮಾನ್ಯತೆ ಆಸ್ಪತ್ರೆಯ 80 ಹಾಸಿಗೆಗಳಿಗೆ ಅನ್ವಯವಾಗಿದ್ದು 2026ರ ಮೇ 21ರಿಂದ 2030ರ ಮೇ 20ರವರೆಗೆ ಮಾನ್ಯವಾಗಿರುತ್ತದೆ. NABH ಅನ್ನು ಅಂತಾರಾಷ್ಟ್ರೀಯ

ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಗೆ NABH ಮಾನ್ಯತೆ Read More »

ಕೆಎಂಇಎಸ್‌ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

ಗುರು – ಗುರಿಯಿಂದ ಶೈಕ್ಷಣಿಕ ಪ್ರಗತಿ : ಕಮಲಾಕ್ಷ ಕಾಮತ್ ಕಾರ್ಕಳ : ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಿದಾಗ ಜೀವನ ಸಾರ್ಥಕ್ಯವಾಗಲಿದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್‌ ಅಭಿಪ್ರಾಯಪಟ್ಟರು.ಅವರು ಜೂ. 24ರಂದು ಕೆಎಂಇಎಸ್‌ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾದಾನವೂ ಶ್ರೇಷ್ಠ ದಾನಗಳಲ್ಲಿ ಒಂದು. ಜೀವನಕ್ಕೆ ಅರ್ಥ ಬರುವುದೇ ಇತರರಿಗಾಗಿ ಬದುಕಿದಾಗ ಎಂದರು.ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಗುರು ಮತ್ತು ಗುರಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಕೆ.ಎಂ.ಇ.ಎಸ್‌. ವಿದ್ಯಾಸಂಸ್ಥೆ

ಕೆಎಂಇಎಸ್‌ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ Read More »

ಬೆಳೆ ವಿಮೆ ಯೋಜನೆ ನೋಂದಣಿಗೆ ಜೂ. 30 ಕೊನೆ ದಿನ

ಅಡಿಕೆ, ಕಾಳುಮೆಣಸು ಬೆಳೆಗಾರರಿಂದ ಅರ್ಜಿ ಸ್ವೀಕಾರ ಉಡುಪಿ : ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.ಯೋಜನೆಯಡಿ ನೊಂದಣಿ ಮಾಡಿಸಲು ಜೂ. 30 ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ

ಬೆಳೆ ವಿಮೆ ಯೋಜನೆ ನೋಂದಣಿಗೆ ಜೂ. 30 ಕೊನೆ ದಿನ Read More »

ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಕಾರ್ಕಳ : ಆರೋಗ್ಯಕರ ಜೀವನಕ್ಕೆ ಯೋಗವೇ ಸರಳ ಮತ್ತು ಪರಿಣಾಮಕಾರಿ ಮಾರ್ಗ. ಬೆಳಗ್ಗಿನ ಓದು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿದರೆ, ಯೋಗವು ಆರೋಗ್ಯವನ್ನು ಕಾಪಾಡುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಸುವುದು ಎಂದು ಕಾರ್ಕಳ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯ ವಿನಾಯಕ ಕುಡ್ವ ಹೇಳಿದರು. ಅವರು ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಐ. ಕ್ರಿಸ್ಟೋಫರ್ ಕೋಟ್ಯಾನ್‌ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ

ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ Read More »

ಭಾರತದ ಆಧ್ಯಾತ್ಮ, ಆಯುರ್ವೇದ, ಯೋಗ ಜಗತ್ತನ್ನೇ ಆಕರ್ಷಿಸುತ್ತಿದೆ – ಸುನಿಲ್‌ ಕುಮಾರ್‌ ಅಭಿಮತ

ಯೋಗಗುರುಗಳಾದ ಕೃಷ್ಣ ಆಚಾರ್ಯ – ಸುಲೋಚನಾ ನಾಯಕ್‌ ಅವರಿಗೆ ಸನ್ಮಾನ ಕಾರ್ಕಳ : ಭಾರತದ ಆಧ್ಯಾತ್ಮ, ಆಯುರ್ವೇದ, ಯೋಗ ಇಂದು ಜಗತ್ತನ್ನೇ ತನ್ನತ್ತ ಆಕರ್ಷಿಸುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.ಅವರು ಜೂ. 21ರಂದು ಕಾರ್ಕಳ ರಾಮಮಂದಿರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯೋಗವು ಭಾರತದ ಪ್ರಾಚೀನ ಮತ್ತು ಅಮೂಲ್ಯ ಪರಂಪರೆಯಾಗಿದೆ. ದೇಹ, ಮನಸ್ಸಿನ ಸಮಾತೋಲನ ಕಾಪಾಡುವಲ್ಲಿ ಯೋಗ ಸಹಕಾರಿಯಾಗುವುದು ಎಂದರು.ಯೋಗಗುರುಗಳಾದ ಕೃಷ್ಣ ಆಚಾರ್ಯ ಹಾಗೂ ಸುಲೋಚನಾ ಟೀಚರ್‌ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ

ಭಾರತದ ಆಧ್ಯಾತ್ಮ, ಆಯುರ್ವೇದ, ಯೋಗ ಜಗತ್ತನ್ನೇ ಆಕರ್ಷಿಸುತ್ತಿದೆ – ಸುನಿಲ್‌ ಕುಮಾರ್‌ ಅಭಿಮತ Read More »

ಅಂಬೇಡ್ಕರ್‌ ಭವನ ನಿರ್ವಹಣಾ ಸಮಿತಿ ಸಮುದಾಯದ ಬದಲು ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ – ಶ್ರೀನಿವಾಸ್‌ ಕಾರ್ಲ ಟೀಕೆ

ಕಾರ್ಕಳ : ಅಣ್ಣಪ್ಪ ನಕ್ರೆ ಮತ್ತು ಪ್ರತಿಮಾ ರಾಣೆ ಹೇಳಿಕೆಯನ್ನು ಗಮನಿಸಿದಾಗ ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿ ಕಾರ್ಕಳದ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವ ಬದಲು ಒಂದು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದೆನಿಸುತ್ತಿದೆ. ರಾಜಕೀಯ ಪ್ರೇರಣೆಯಿಂದ ಕೆಲಸ ನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕಾರ್ಕಳ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ ಕಾರ್ಲ ತಿಳಿಸಿದ್ದಾರೆ. ಅಂಬೇಡ್ಕರ್ ಭವನದ ಆವರಣ ಗೋಡೆ, ನೀರಿನ ವ್ಯವಸ್ಥೆ ಮತ್ತು ಆಸನದ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳು ಇನ್ನೂ

ಅಂಬೇಡ್ಕರ್‌ ಭವನ ನಿರ್ವಹಣಾ ಸಮಿತಿ ಸಮುದಾಯದ ಬದಲು ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ – ಶ್ರೀನಿವಾಸ್‌ ಕಾರ್ಲ ಟೀಕೆ Read More »

ಜೂ. 21ರಂದು ನೀಟ್ ಮರು ಪರೀಕ್ಷೆ – ಲೋಪವಿಲ್ಲದೇ ನಡೆಸುವಂತೆ ಡಿಸಿ ಸೂಚನೆ

ಜಿಲ್ಲೆಯಲ್ಲಿ 6 ಪರೀಕ್ಷಾ ಕೇಂದ್ರ – 2970 ವಿದ್ಯಾರ್ಥಿಗಳು ನೋಂದಣಿ ಉಡುಪಿ : ಜಿಲ್ಲೆಯಲ್ಲಿ ಜೂ. 21 ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯಲ್ಲಿ ಯಾವುದೇ ಲೋಪವಿಲ್ಲದೇ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜೂ. 18ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನೀಟ್ ಮರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಷನಲ್ ಟೆಸ್ಟಿಂಗ್

ಜೂ. 21ರಂದು ನೀಟ್ ಮರು ಪರೀಕ್ಷೆ – ಲೋಪವಿಲ್ಲದೇ ನಡೆಸುವಂತೆ ಡಿಸಿ ಸೂಚನೆ Read More »

ಜೂ. 21 : ಸದಾಶಿವ ಪ್ರಭು ಎಳ್ಳಾರೆ ಅವರಿಗೆ ಅಭಿನಂದನೆ

ಕಾರ್ಕಳ : ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ಜೂ. 21ರಂದು ಸಂಜೆ 4 ಗಂಟೆಗೆ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ವಠಾರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ಭಾರತೀಯ ವಾಯುಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಭಾರತೀಯ ಆಡಳಿತ ಸೇವೆ (ಐಎಎಸ್) ಆಗಿ ಭಡ್ತಿಗೊಂಡಿದ್ದರು.ಜೂ.

ಜೂ. 21 : ಸದಾಶಿವ ಪ್ರಭು ಎಳ್ಳಾರೆ ಅವರಿಗೆ ಅಭಿನಂದನೆ Read More »

error: Content is protected !!
Scroll to Top