ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್‌ ಮನ್ಹಾಸ್‌

ಖಜಾಂಚಿಯಾಗಿ ಪುತ್ತೂರಿನ ರಘುರಾಮ್‌ ಭಟ್‌

ಮುಂಬೈ : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ದೆಹಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಹಾಗೂ ಖಜಾಂಚಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ಎ. ರಘುರಾಮ್ ಭಟ್ ಆಯ್ಕೆಯಾಗಿದ್ದಾರೆ. ಸೆ. 28ರಂದು ಮುಂಬೈಯಲ್ಲಿ ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 45 ವರ್ಷದ ಮನ್ಹಾಸ್ ಅವರು ಮಂಡಳಿಯ 37ನೇ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ಮಿಥುನ್ ಮನ್ಹಾಸ್ 1997 ರಿಂದ 2017 ರವರೆಗೆ ದೇಶೀಯ ಕ್ರಿಕೆಟ್ ನಲ್ಲಿ ಆಡಿದ್ದರು. 157 ಪ್ರಥಮ ದರ್ಜೆ, 130 ಲಿಸ್ಟ್ ಎ ಪಂದ್ಯಗಳಿಂದ 45.82 ಸರಾಸರಿಯಲ್ಲಿ 9714 ರನ್ ಗಳಿಸಿದ್ದರು. 27 ಶತಕ ಮತ್ತು 49 ಅರ್ಧ ಶತಕಗಳಿಂದ ಕೂಡಿತ್ತು.
ಖಜಾಂಚಿಯಾಗಿ ಆಯ್ಕೆಯಾಗಿರುವ 67 ವರ್ಷದ ರಘುರಾಮ್ ಭಟ್ ಅವರು ಕರ್ನಾಟಕ ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಆಡಿದವರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಅವರು 2 ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಕೋಚ್ ಆಗಿ, ಕ್ರಿಕೆಟ್ ಆಡಳಿತಗಾರನಾಗಿ‌ ಗುರುತಿಸಿಕೊಂಡಿದ್ದ ಅವರು ಕಳೆದ 3 ವರ್ಷಗಳಿಂದ ಕೆಎಸ್‌ಸಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

























































































































error: Content is protected !!
Scroll to Top