ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವತಿಯಿಂದ ಶಕ್ತಿ ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಆ. 5ರಂದು ಸುವರ್ಣ ಗ್ರಾಮೋದಯ ಸೌಧದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಪ್ರಾಸ್ತಾವಿವಾಗಿ ನಿಕಟ ಪೂರ್ವ ಅಧ್ಯಕ್ಷರು ಜಯಲಕ್ಷ್ಮಿ ಶೆಟ್ಟಿಗಾರ್ ಮಾತನಾಡಿದರು. ಕಾರ್ಯಕ್ರಮವನ್ನು ಸಾಣೂರು ಪಂಚಾಯತ್ ಅಧ್ಯಕ್ಷರು ಯುವರಾಜ್ ಜೈನ್ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಸಾಣೂರು ಶಾಖೆಯ ಬ್ಯಾಂಕ್ ಆಫ್ ಬರೋಡದ ಪ್ರಬಂಧಕರು ಅವಿನಾಶ್ ಮಾತನಾಡಿ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಅರುಣಾ ಕುಮಾರಿ ಮಲೇರಿಯಾ ವಿರೋಧ ಮಾಸಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿ ಟೀಚರ್ ಸಾಕಮ್ಮ ಆಟಿ ತಿಂಗಳ ಬಗ್ಗೆ ಮಾತನಾಡಿದರು. ನಂತರ ಆಟೋಟ ಸ್ಪರ್ಧೆ ಮತ್ತು ಹೆಚ್ಚು ತಿನಿಸು ಮಾಡಿದವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಗೀತಾ ದೇವಾಡಿಗ, ಪಂಚಾಯತ್ ಸದಸ್ಯರಾದ ಸುಮತಿ, ಪ್ರಮೀಳಾ ಹಾಗೂ ಒಕ್ಕೂಟದ ಕೋಶಾಧಿಕಾರಿ ವನಿತಾ ಪಿ., ವಾರ್ಡ್ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸಾದಿನಿ ಜೈನ್ ನಿರೂಪಿಸಿ, ಪ್ರಾರ್ಥನೆ ಗೈದರು, ಜಯಶ್ರೀ ದೇವಾಡಿಗ ಸ್ವಾಗತಿಸಿ, ಶ್ವೇತಾ ದೇವಾಡಿಗ ಧನ್ಯವಾದವಿತ್ತರು.








































