ಮಂಗಳೂರು : 123 ಕೆ.ಜಿ. ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ 2 ವಾಹನವನ್ನು ಮಂಗಳೂರು ನಗರ ಸಿಸಿಬಿ ತಂಡವು ಪತ್ತೆ ಹಚ್ಚಿದ್ದು ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಜು. 31ರಂದು ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ಮಠದಕೆರೆ ಬಳಿ ಅಕ್ರಮವಾಗಿ ಆಂಧ್ರ ಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ 2 ವಾಹನಗಳನ್ನು ಪತ್ತೆ ಹಚ್ಚಿದ್ದು, ಆರೋಪಿಗಳಾದ ಕಾಸರಗೋಡು ಆಡೂರಿನ ಮಸೂದ್ ಎಂ. ಕೆ., ಕಾಸರಗೋಡು ಪರಪ್ಪ ದೇಲಂಪಾಡಿಯ ಮೊಹಮ್ಮದ್ ಆಶಿಕ್ ಹಾಗೂ ಅದೇ ಊರಿನ ಸುಬೇರ್ ನನ್ನು ವಶಕ್ಕೆ ಪಡೆಯಲಾಗಿದೆ. 123 ಕೆಜಿ ಗಾಂಜಾ, ಎರಡು ವಾಹನಗಳು (KA-21-P-9084 ಹಾಗೂ KL-14-AF-7010) ಹಾಗೂ 5 ಮೊಬೈಲ್ ಫೋನ್ ಸೇರಿ ಒಟ್ಟು 46,20,000 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























































