ಕಾರ್ಕಳ : ಕಾರ್ಕಳ ಬೋರ್ಡ್ ಹೈಸ್ಕೂಲ್ ಮುಂಭಾಗ ನಿರ್ಮಾಣಗೊಂಡಿರುವ ಪ್ರೈಮ್ ಸಿಟಿ ಸೆಂಟರ್ ಜ. 12ರ ರವಿವಾರ ಸಂಜೆ 5:30ಕ್ಕೆ ಉದ್ಘಾಟನೆಗೊಳ್ಳಲಿದೆ. ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಬಂಟ್ವಾಳ ವಾಸುಕಿ ವನ ವರದರಾಜ್, ನಾರಾಯಣ ಭಟ್ ಕಾರ್ಕಳ, ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ, ಗಾಯತ್ರಿ ಎಕ್ಸ್‌ಪೋರ್ಟ್‌ನ ಬೋಳ ಪ್ರಭಾಕರ್ ಕಾಮತ್, ಎ.ಎಂ. ಕಮರುದ್ದೀನ್ ಮಂಗಳೂರು, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ನ್ಯಾಯವಾದಿ ಐ. ಆರ್. ಬಲ್ಲಾಳ್, ಪುರಸಭಾ ಸದಸ್ಯೆ ಸುಮಾ ಕೇಶವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಹಾವೀರ ಹೆಗ್ಡೆ, ಎಂ.ಕೆ. ಸುವೃತ್ ಕುಮಾರ್, ಸಂಪತ್ ಜೈನ್ ಕಾರ್ಕಳ ತಿಳಿಸಿದ್ದಾರೆ.
ಜ. 12 : ಪ್ರೈಮ್ ಸಿಟಿ ಸೆಂಟರ್ ಉದ್ಘಾಟನೆ



























