ಕೊಳಕೆ ಇರ್ವತ್ತೂರು ಬಿಲ್ಲವ ಬಾಂದವೆರ್ – ಕ್ರೀಡಾ ಸಾಧಕರಿಗೆ ಅಭಿನಂದನೆ

ಕಾರ್ಕಳ : ಬಿಲ್ಲವ ಬಾಂದವೆರ್ ಕೊಳಕ್ಕೆ ಇರ್ವತ್ತೂರು ಇವರ ವತಿಯಿಂದ ವಾಲಿಬಾಲ್ ಮತ್ತು ತ್ರೊಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ಇರ್ವತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕ ಆನಂದ ಪೂಜಾರಿ ಅವರಿಗೆ ಸೆ. 25ರಂದು ಅಭಿನಂದನಾ ಸಮಾರಂಭ ಜರುಗಿತು.
ಸಮಿತಿ ಗೌರವ ಸಲಹೆಗಾರ ಉದಯ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಗೋಪಾಲ ಕೆ. ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸದಸ್ಯ ಶೇಖರ ಅಂಚನ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶಕುಂತಲಾ ಟಿ., ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಧ್ವರಾಜ ಪೂಜಾರಿ, ರಮೇಶ ಅಂಚನ್ ಉಪಸ್ಥಿತರಿದ್ದರು. ಮಿಥುನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.















error: Content is protected !!
Scroll to Top