ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿಗೆ ಇಂದಿನ ಮಾರುಕಟ್ಟೆ ದರ ಇಂತಿದೆ

ಕಾರ್ಕಳ : ಕೆಲವೆಡೆ ವಿಪರೀತ ಮಳೆ ಮತ್ತು ಇನ್ನು ಕೆಲವು ಭಾಗಗಳಲ್ಲಿ ಮಳೆಯೇ ಇಲ್ಲದ ಕಾರಣ ತರಕಾರಿ ಬೆಲೆಯಲ್ಲಿ ಏರಿಳಿತವಾಗಿದೆ. ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳವಾಗುತ್ತದೆ ಎನ್ನಲಾಗುತ್ತಿದೆ. 25 ರಿಂದ 35 ರೂ. ಇದ್ದ ಟೊಮ್ಯಾಟೋ ಬೆಲೆ 40 ರವರೆಗೆ ಹೆಚ್ಚಳವಾಗಿದೆ. ಈರುಳ್ಳಿ ಬೆಲೆ 25 ರೂ. ಆಗಿದ್ದು, 80 ರೂ. ಇದ್ದ ನುಗ್ಗೆಕಾಯಿ ಬೆಲೆ 120 – 140 ಕ್ಕೆ ಏರಿಕೆಯಾಗಿದೆ. ಲಿಂಬೆಯ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು 120 ರವರೆಗೆ ಇದ್ದ ದರ 80 ರೂ. ಗೆ ಇಳಿದಿದೆ.

ಕೊತ್ತಬಂರಿ ಸೊಪ್ಪು: 100 ರೂ., ಮುಳ್ಳುಸೌತೆ : 30- 40 ರೂ., ಶುಂಠಿ : 180 ರೂ., ಟೊಮ್ಯಾಟೋ : 35-40 ರೂ. , ನೀರುಳ್ಳಿ : 25 ರೂ., ಬಟಾಟೆ : 25 -30ರೂ., ಬೆಳ್ಳುಳ್ಳಿ : 140 ರೂ., ಸೌತೆ : 20 ರೂ., ಬೀನ್ಸ್‌ : 100 ರೂ., ಬಿಳಿ ಬೀನ್ಸ್‌ – 80 ರೂ., ಕಾಯಿಮೆಣಸು : 80ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 ರೂ., ಬೆಂಡೆ : 50 ರೂ., ಕುಂಬಳಕಾಯಿ : 25 -30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 30-60 ರೂ., ಹಾಗಲಕಾಯಿ : 60 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 90 ರೂ., ಉದ್ದ ಮೆಣಸು : 60 ರೂ., ಬದಣೆ : 50 ರೂ., ಗುಳ್ಳ : 80 ರೂ., ನುಗ್ಗೆ ಕಾಯಿ – 120-140 ರೂ.





























































































































































































































error: Content is protected !!
Scroll to Top