ಕಾಂತಾರ ಚಿತ್ರಕ್ಕೆ ಮತ್ತೊಂದು ಸಂಕಷ್ಟ

ವರಾಹ ರೂಪಂ ಹಾಡಿಗೆ ಇನ್ನೊಂದು ತಡೆಯಾಜ್ಞೆ

ಪಾಲಕ್ಕಾಡ್‌ : ಯಶಸ್ವಿ ಚಿತ್ರ ಕಾಂತಾರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಕೋರ್ಟ್ ಚಿತ್ರದ ‘ವರಾಹ ರೂಪಂ.. ಹಾಡಿಗೆ’ ತಡೆ ನೀಡಿತ್ತು. ಇದೀಗ ಪಾಲಕ್ಕಾಡ್‌ನ ಕೋರ್ಟ್‌ ಕೂಡ ಇದೇ ಮಾದರಿಯ ಆದೇಶ ಹೊರಡಿಸಿದೆ. ‘ವರಾಹ ರೂಪಂ..’ ಹಾಡಿನ ಪ್ರಸಾರವನ್ನು ತಡೆಯಬೇಕೆಂದು ಪಾಲಕ್ಕಾಡ್‌ ಕೋರ್ಟ್‌ ಹೇಳಿದೆ.
‘ಮಾತೃಭೂಮಿ ಮ್ಯೂಸಿಕ್’​ ಎಂಬ ಪಾಲಕ್ಕಾಡ್​ನ ಮ್ಯೂಸಿಕ್‌ ಬ್ಯಾಂಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಈ ವರಾಹ ರೂಪಂ…ಹಾಡಿನ ವಿರುದ್ಧ ಕೇಸ್ ದಾಖಲು ಮಾಡಿದೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ, ಪ್ರಸಾರ ಮಾಡುವಂತಿಲ್ಲ ಎಂದು ಹಾಡಿಗೆ ತಡೆಯಾಜ್ಞೆ ನೀಡಿದೆ.





























































































































































































































error: Content is protected !!
Scroll to Top