ಗೋವಾ ಬೀಚ್‌ಗಳಲ್ಲಿ ಇನ್ನು ಮದ್ಯಪಾನ ಮಾಡುವಂತಿಲ್ಲ

ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲು ಕಠಿನ ನಿಯಮ ರಚನೆ

ಪಣಜಿ: ತನ್ನ ಆದಾಯದ ಪ್ರಮುಖ ಮೂಲವಾದ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿರುವ ಗೋವಾ ಸರ್ಕಾರ, ಬೀಚ್‌ಗಳಲ್ಲಿ ಬಹಿರಂಗವಾಗಿ ಮದ್ಯಪಾನ, ಕಡಲ ದಂಡೆಯಲ್ಲಿ ವಾಹನ ಸಂಚಾರ, ಭಿಕ್ಷೆ ಬೇಡುವುದಕ್ಕೆ ದಂಡ ವಿಧಿಸಲು ನಿರ್ಧರಿಸಿದೆ.
ಸರಕಾರದ ಆದೇಶದ ಪ್ರಕಾರ ಈ ದಂಡ ನಿಯಮ ಉಲ್ಲಂಘಿಸುವವರಿಗೆ 5,000 ರೂ. ನಿಂದ 50,000 ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ. ಗೋವಾ ಪ್ರವಾಸೋದ್ಯಮ ಇಲಾಖೆಯ (Goa Tourism Department) ಹೊಸ ಆದೇಶದ ಅನ್ವಯ, ಪ್ರವಾಸಿಗರು ಪ್ರವಾಸಿ ಸ್ಥಳಗಳಲ್ಲಿ ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಕಸ ಎಸೆಯುವುದು, ಮದ್ಯ ಸೇವಿಸುವುದು, ಭಿಕ್ಷೆ ಬೇಡುವುದು, ಅಕ್ರಮವಾಗಿ ಸರಕುಗಳ ಮಾರಾಟ, ಪ್ರವಾಸಿ ಸ್ಥಳಗಳಲ್ಲಿ ಪ್ರಚಾರ ನಡೆಸುವುದು, ಕಡಲ ತೀರದಲ್ಲಿ ವಾಹನ ಚಲಾಯಿಸುವುದು ಮೊದಲಾದವುಗಳ ಮೇಲೆ ನಿಷೇಧ ಹೇರಲಾಗಿದೆ.
ಪ್ರವಾಸೋದ್ಯಮದ ಇಮೇಜ್ ಹೆಚ್ಚಿಸಲು, ಪ್ರವಾಸಿ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಪ್ರವಾಸಿಗರಿಗೆ ಸುರಕ್ಷಿತವಾಗಿಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

Latest Articles

error: Content is protected !!