ಕ್ರಿಯೇಟಿವ್‌ ಕಾಲೇಜಿನಲ್ಲಿ ಸಿಎಸ್‌ ಕಾರ್ಯಾಗಾರ

ಸಿಎ – ಸಿಎಸ್‌ ಕ್ಷೇತ್ರದಲ್ಲಿ ವಿಫುಲ ಅವಕಾಶ – ಸಂತೋಷ್‌ ಪ್ರಭು

ಕಾರ್ಕಳ : ಮುಂದಿನ ದಿನಗಳಲ್ಲಿ ಚಾರ್ಟೆಡ್‌ ಅಕೌಂಟಂಟ್‌ ಹಾಗೂ ಕಂಪೆನಿ ಸೆಕ್ರೆಟರಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಈಗಿನಿಂದಲೇ ಅದಕ್ಕೆ ಪೂರಕ ತಯಾರಿ ನಡೆಸಬೇಕೆಂದು ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ್‌ ಪ್ರಭು ಹೇಳಿದರು. ಅವರು ಶುಕ್ರವಾರ ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಸಿಎಸ್‌ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಿಎಸ್ ಎನ್ನುವುದು ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರಾಂಶುಪಾಲರು ಹೇಗೆ ವಿದ್ಯಾರ್ಥಿಗಳ, ಬೋಧಕ-ಬೋಧಕೇತರ ವರ್ಗದ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸುತ್ತಾರೆಯೋ ಹಾಗೆಯೇ ಓರ್ವ ಕಂಪೆನಿ ಸೆಕ್ರೆಟರಿಯೂ ಕಾರ್ಯನಿರ್ವಹಿಸುತ್ತಾನೆ ಎಂದವರು ಹೇಳಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಬಿ. ರಾವ್, ಉಪನ್ಯಾಸಕರಾದ ಉಮೇಶ್, ಅಕ್ಷತಾ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿನುತಾ ಸ್ವಾಗತಿಸಿ, ನಿರೂಪಿಸಿದರು. ಪ್ರಜ್ವಲ್ ವಂದಿಸಿದರು.































































































error: Content is protected !!
Scroll to Top