ಮುದ್ರಾಡಿ ರಾಜಶೇಖರ ಅಧಿಕಾರಿಯವರಿಗೆ ಗೌರವಾರ್ಪಣೆ

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಛತ್ರಪತಿ ಫೌಂಡೇಷನ್ ಮತ್ತು ಸಿನೀಯರ್ ಚೇಂಬರ್ ಕಾರ್ಕಳ ಇದರ ವತಿಯಿಂದ ಅಮೃತ ಭಾರತಿಗೆ ಕನ್ನಡದಾರತಿ ವಿಶೇಷ ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುದ್ರಾಡಿ ಧರ್ಮರಾಜ ಅಧಿಕಾರಿ ಅವರ ಮನೆಗೆ ಭೇಟಿ ನೀಡಿ ಅವರ ಮಗ ರಾಜಶೇಖರ ಅಧಿಕಾರಿ ಅವರಿಗೆ ಛತ್ರಪತಿ ಅಮೃತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಂ.ಡಿ. ಅಧಿಕಾರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಬಾರಿ ಬ್ರಿಟೀಷರಿಂದ ಜೈಲುವಾಸ ಹಾಗೂ ಕಠಿಣ ಶಿಕ್ಷೆಗೊಳಪಟ್ಟಿದ್ದರು. ಅವರ ಪತ್ನಿ ಕಮಲಾವತಿ ಅಧಿಕಾರಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ತಮ್ಮ ಹುಟ್ಟೂರಾದ ಮುದ್ರಾಡಿಯಲ್ಲಿ ಕಸ್ತೂರ್ ಬಾ ಸ್ಮಾರಕ ರಾಷ್ಟ್ರೀಯ ಶಾಲೆಯೊಂದನ್ನು ಸ್ಥಾಪಿಸಿದ್ದರು. ಗ್ರಾಮೋದ್ಯೋಗ, ದೀನ ದಲಿತರ ಸೇವೆ, ವಯಸ್ಕರ ಶಿಕ್ಷಣ ಇತ್ಯಾದಿ ರಚನಾತ್ಮಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಎಂ.ಡಿ. ಅಧಿಕಾರಿಯವರು ತಮ್ಮ ಬದುಕನ್ನು ದೇಶಸೇವೆಗಾಗಿಯೇ ಮುಡಿಪಾಗಿಟ್ಟವರು ಎಂದು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹೇಳಿದರು.
ಛತ್ರಪತಿ ಪೌಂಡೇಶನ್ ಅಧ್ಯಕ್ಷ ಗಿರೀಶ್ ರಾವ್, ಇಂಡಿಯನ್ ಸಿನಿಯರ್ ಚೇಂಬರ್ ಅಧ್ಯಕ್ಷ ಸುನಿಲ್ ಕೋಟ್ಯಾನ್, ಕಸಾಪ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಧರಣೇಂದ್ರ, ಸುರೇಶ್ ಇಂದ್ರ ಉಪಸ್ಥಿತರಿದ್ದರು. ಅಧ್ಯಾಪಕರಾದ ದೇವದಾಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





























































































































































































































error: Content is protected !!
Scroll to Top