Saturday, October 1, 2022
spot_img
Homeಸುದ್ದಿಸಿದ್ದರಾಮಯ್ಯ 2023ರ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

ಸಿದ್ದರಾಮಯ್ಯ 2023ರ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯೇ ತನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಸಭೆಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 81 ವರ್ಷದ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಘೋಷಿಸಿದ್ದಾರೆ. ಇದರರ್ಥ 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುವ ಕೊನೆಯ ಚುನಾವಣೆಯಾಗಲಿದೆ.
ಮುಂದಿನ ವಿಧಾನಸಭಾ ಅವಧಿ ಪೂರ್ಣಗೊಂಡಾಗ ನನಗೆ 81 ವರ್ಷ ಆಗುತ್ತದೆ. ಹಾಗಾಗಿ, ಇದು ನನ್ನ ಕೊನೆಯ ಚುನಾವಣೆ. ನನ್ನ ಮಗ ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸಿ ಶಾಸಕನೂ ಆಗಿದ್ದಾನೆ. ರಾಜಕೀಯ ಎಂದರೆ ಅಧಿಕಾರ ಪಡೆದು ಹಣ ಮಾಡುವುದಲ್ಲ, ಮಜಾ ಮಾಡುವುದಲ್ಲ, ನಾಡಿನ ಜನರ ಸೇವೆಯನ್ನು ಮಾಡುವುದು ಎಂದರು.
40 ವರ್ಷಗಳಿಂದ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನನ್ನ ಐದು ವರ್ಷ ಆಡಳಿತದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಸಹಾಯ ಮಾಡಿದ್ದೇನೆ ಎಂದರು.

LEAVE A REPLY

Please enter your comment!
Please enter your name here

Most Popular

error: Content is protected !!