Saturday, October 1, 2022
spot_img
Homeಸುದ್ದಿಹತ್ತನೇ ತರಗತಿಯ ಮೂವರು ಬಾಲಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಹತ್ತನೇ ತರಗತಿಯ ಮೂವರು ಬಾಲಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಚೆನ್ನೈ: ಹತ್ತನೇ ತರಗತಿಯ ಮೂವರು ಬಾಲಕರು ಸಹಪಾಠಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಅದರ ವೀಡಿಯೊ ಚಿತ್ರೀಕರಿಸಿ ಶೇರ್‌ ಮಾಡಿಕೊಂಡ ಆಘಾತಕಾರಿ ಘಟನೆಯೊಂದು ತಮಿಳುನಾಡಿನಲ್ಲಿ ಸಂಭವಿಸಿದೆ.
ಕಡಲೂರು ಜಿಲ್ಲೆಯ ತಿಟ್ಟಾಕುಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಆಕೆಯ ಗೆಳೆಯನ ಜೊತೆಗಿರುವ ಫೋಟೊವನ್ನು ತೋರಿಸಿ ಈ ಮೂವರು ಬಾಲಕರು ಆಕೆಯನ್ನು ಬೆದರಿಸಿ ಮನೆಗೆ ಕರೆಸಿಕೊಂಡಿದ್ದರು. ಬರ್ತ್‌ಡೇ ಪಾರ್ಟಿಯೊಂದರಲ್ಲಿ ಬಾಲಕಿ ತನ್ನ ಗೆಳೆಯನ ಜೊತೆಗೆ ನಿಂತಿರುವ ಫೊಟೊ ತೆಗೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಮಧ್ಯಾಹ್ನದ ಲಂಚ್‌ಬ್ರೇಕ್‌ ಹೊತ್ತಲ್ಲಿ ಆರೋಪಿಗಳಲ್ಲಿ ಒಬ್ಬನ ಮನೆಗೆ ಬರಲು ಹೇಳಿದ್ದರು. ಅದರಂತೆ ವಿದ್ಯಾರ್ಥಿನಿ ಹೋದಾಗ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಕೃತ್ಯದ ವೀಡಿಯೊ ಮಾಡಿ ಇತರರ ಜತೆಗೆ ಹಂಚಿಕೊಂಡಿದ್ದರು. ಬಾಲಕಿ ತಾಯಿಗೆ ವಿಷಯ ತಿಳಿಸಿದ ಬಳಿಕ ಕೃತ್ಯ ಬಯಲಿಗೆ ಬಂದಿದೆ. ಆರೋಪಿ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೊ ಕಾಯಿದೆಯಡಿ ಕೇಸ್‌ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!