Sunday, October 2, 2022
spot_img
Homeಸುದ್ದಿಜು. 24 : ಕಾಂತಾವರದಲ್ಲಿ 20ನೇ ವರ್ಷದ ಯಕ್ಷೋಲ್ಲಾಸ - ಪ್ರಶಸ್ತಿ ಪುರಸ್ಕಾರ

ಜು. 24 : ಕಾಂತಾವರದಲ್ಲಿ 20ನೇ ವರ್ಷದ ಯಕ್ಷೋಲ್ಲಾಸ – ಪ್ರಶಸ್ತಿ ಪುರಸ್ಕಾರ

ಕಾರ್ಕಳ : ಶ್ರೀ ಯಕ್ಷದೇಗುಲ ಕಾಂತಾವರ ಸಂಯೋಜಿಸುವ ನಿರಂತರ ಹನ್ನೆರಡು ತಾಸಿನ 20ನೇ ವರ್ಷದ ಯಕ್ಷೋಲ್ಲಾಸ ಕಾರ್ಯಕ್ರಮ ಜು. 24ರ ಭಾನುವಾರ ಶ್ರೀ ಕ್ಷೇತ್ರ ಕಾಂತಾವರ ದೇವಸ್ಥಾನದಲ್ಲಿ ಜರುಗಲಿದೆ. ಬೆಳಿಗ್ಗೆ 10 ಗಂಟೆಗೆ ಬಾರಾಡಿಬೀಡು ಸುಮತಿ ಆರ್.‌ ಬಲ್ಲಾಳ್‌ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಶ್ರೀ ಕೃಷ್ಣ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅಪರಾಹ್ನ 2:30ರಿಂದ ವೀರವರ್ಮ ವಿಜಯ ತಾಳಮದ್ದಳೆ, ಸಂಜೆ 7ರಿಂದ ಕುಮಾರ ವಿಜಯ ಬಯಲಾಟ ಪ್ರದರ್ಶನಗೊಳ್ಳಲಿದೆ. ಖ್ಯಾತ ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಶಿವಶಂಕರ ಬಲಿಪ, ಪೊಳಲಿ ದಿವಾಕರ ಆಚಾರ್ಯ, ಮಹೇಶ್‌ ಕನ್ಯಾಡಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಕಲಾವಿದರಾದ ಎಂ. ಪ್ರಭಾಕರ ಜೋಷಿ, ಅಶೋಕ್‌ ಭಟ್‌ ಉಜಿರೆ, ರಾಧಾಕೃಷ್ಣ ಕಲ್ಚಾರ್‌, ಶ್ರೀರಮಣಾಚಾರ್‌ ಕಾರ್ಕಳ, ಪಶುಪತಿ ಶಾಸ್ತ್ರಿ, ವಸಂತ ಗೌಡ ಕಾರ್ಯತಡ್ಕ, ಸೀತಾರಾಮ ಕುಮಾರ್‌ ಕಟೀಲು, ಸತೀಶ್‌ ನೈನಾಡ್‌, ಡಾ. ಶ್ರುತಕೀರ್ತಿರಾಜ್‌ ಉಜಿರೆ, ಗಣೇಶ್‌ ಶೆಟ್ಟಿ, ಅಕ್ಷಯ್‌ ಮಾರ್ನಾಡ್‌, ಮಹೇಶ್‌ ಸಾಣೂರು, ಪ್ರಭಾಕರ ಆಚಾರ್ಯ, ರಂಜಿತ್‌ ಆಚಾರ್ಯ, ಅಕ್ಷಯ್‌ ಭಟ್‌, ರಂಜಿತ್‌ ಪಾಟ್ಕರ್‌ ಸೇರಿದಂತೆ ಹಲವಾರು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕೊಂಕಣಾಜೆ, ರವಿರಾಜ್‌, ಶಿತಿಕಂಠ, ಆನಂದ ಗುಡಿಗಾರ್, ದೇವಾನಂದ‌, ವೆಂಕಟೇಶ, ಉದಯ ಹಿಮ್ಮೆಳದಲ್ಲಿ ಸಹಕರಿಸಲಿದ್ದಾರೆ.

ಸಭಾ ಸಂಭ್ರಮ
ಶ್ರೀ ಕ್ಷೇತ್ರ ಕಾಂತಾವರ ದೇವಸ್ಥಾನದ ಧರ್ಮದರ್ಶಿ ಬಾರಾಡಿಬೀಡು ಡಾ. ಕೆ. ಜೀವಂಧರ ಬಲ್ಲಾಳ್‌ ಅವರ ಅಧ್ಯಕ್ಷತೆಯಲ್ಲಿ ಅಪರಾಹ್ನ 2 ಗಂಟೆಯಿಂದ ಸಭಾ ಸಂಭ್ರಮ ಜರಗಲಿದೆ. ಸಚಿವ ವಿ. ಸುನೀಲ್‌ ಕುಮಾರ್‌, ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ, ಉದ್ಯಮಿ ಶ್ರೀಪತಿ ಭಟ್‌, ವಿಜಯ ಶೆಟ್ಟಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉಪಸ್ಥಿತರಿರುವರು.

ವಿಂಶತಿ ಪುರಸ್ಕಾರ
ಯಕ್ಷಗಾನದ ನಿವೃತ್ತ ಕಲಾವಿದ ಡಾ. ಕೋಳ್ಯೋರು ರಾಮಚಂದ್ರ ರಾವ್‌ ಅವರಿಗೆ ವಿಂಶತಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಅಭಿನಂದನಾ ಭಾಷಣ ಮಾಡಲಿದ್ದಾರೆ.

‍ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ
ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ವಸಂತ ಗೌಡ ಕಾರ್ಯರ್ತಡ್ಕ ಅವರಿಗೆ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಲಾವಿದ ಸಾಣೂರು ಗಣೇಶ್‌ ಶೆಟ್ಟಿ ಅವರಿಗೆ ವಿಂಶತಿ ಯುವ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಉಪನ್ಯಾಸಕ ಡಾ.ಶ್ರುತಕೀರ್ತಿರಾಜ್‌ ಉಜಿರೆ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಲಿರುವರು ಎಂದು ಯಕ್ಷದೇಗುಲದ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!