ಬೈಕ್‌ ಡಿಕ್ಕಿ – ಪಾದಚಾರಿ ಸ್ಥಳದಲ್ಲೆ ಸಾವು

ಕಾರ್ಕಳ : ವ್ಯಕ್ತಿಯೋರ್ವರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವಿಗೀಡಾದ ಘಟನೆ ನೀರೆ ಗ್ರಾಮದ ಬಾದಾಮಿಕಟ್ಟೆಯಲ್ಲಿ ಸಂಭವಿಸಿದೆ.
ನೀರೆ ಗ್ರಾಮದ ಸಂತೋಷ ನಾಯಕ್ (48) ಎಂಬವರೇ ಮೃತಪಟ್ಟ ದುರ್ದೈವಿ. ಫೆ. 1ರ ರಾತ್ರಿ ಪತ್ನಿಯೊಂದಿಗೆ ವಾಕಿಂಗ್‌ ಮಾಡುತ್ತಿದ್ದ ವೇಳೆ ಉಡುಪಿಯಿಂದ ಕಾರ್ಕಳದ ಕಡೆಗೆ ವೇಗವಾಗಿ ಸಾಗುತ್ತಿದ್ದ ಬೈಕ್‌ (KA 20EN 4604) ಸಂತೋಷ್‌ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ತಕ್ಷಣ ಅವರನ್ನು ಬೈಲೂರು ಕೆ.ಎಸ್.‌ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಂತೋಷ್‌ ಅವರು ಫೆ.೨ ರಂದು ಮೃತಪಟ್ಟಿರುತ್ತಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

error: Content is protected !!
Scroll to Top