ನಕ್ರೆಯ ಫಾ. ರೋಶನ್‌ ಕ್ಯಾಸ್ಟಲಿನೋ ಎಸ್.‌ ಜೆ. ಅವರಿಗೆ ಡಾಕ್ಟರೇಟ್‌

ಕಾರ್ಕಳ : ಬೆಂಗಳೂರಿನ ಸೈಂಟ್‌ ಜೋಸೆಫ್ಸ್ (ಸ್ವಾಯತ್ತ) ಕಾಲೇಜಿನ ಭೌತಶಾಸ್ತ್ರ ಸಂಶೋಧನಾ ವಿಭಾಗದ ನಿರ್ದೇಶಕ, ಕಾರ್ಕಳ ಕುಕ್ಕುಂದೂರು ಗ್ರಾಮದ ನಕ್ರೆಯ ಫಾ. ರೋಶನ್‌ ಕ್ಯಾಸ್ಟಲಿನೋ ಎಸ್.‌ ಜೆ. ಅವರಿಗೆ ಬೆಲ್ಜಿಯಂನ ನಮೂರ್‌ ವಿಶ್ವವಿದ್ಯಾನಿಲಯ ಡಾಕ್ಟರೇಟ್‌ ಪದವಿ ನೀಡಿದೆ. ಭೌತಶಾಸ್ತ್ರದ ಸೆಮಿಕಂಡಕ್ಟರ್‌ ವಿಷಯದಲ್ಲಿ ಪ್ರೊಫೆಸರ್‌ ರಾಬರ್ಟ್‌ ಸ್ಪೋರ್ಕನ್‌ ಮಾರ್ದರ್ಶನದಲ್ಲಿ 4 ವರ್ಷಗಳ ಕಾಲ ನಡೆಸಿದ ಸಂಶೋಧನೆಗೆ ಡಾಕ್ಟರೇಟ್‌ ಪದವಿ ದೊರೆತಿದೆ.
ರೋಶನ್‌ ಅವರು ಕಾರ್ಕಳ ನಕ್ರೆಯ ನಿವೃತ್ತ ಶಿಕ್ಷಕ ದಂಪತಿ ಜಾರ್ಜ್‌ ಕ್ಯಾಸ್ಟೋಲಿನೋ ಹಾಗೂ ರಿನಾ ಕ್ಯಾಸ್ಟೋಲಿನೋ ಅವರ ಪುತ್ರ.

ಶಿಕ್ಷಣ
ನಕ್ರೆ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕ ಪಡೆದಿರುವ ರೋಶನ್‌ ಅವರು ಬಳಿಕ ನಕ್ರೆ ಸರಕಾರಿ ಪ್ರೌಢಶಾಲೆ, ಮಂಗಳೂರು ಸೈಂಟ್‌ ಅಲೋಸಿಯಸ್‌ ಕಾಲೇಜಿನಲ್ಲಿ ಬಿಎಸ್ಸಿ, ಕ್ರೈಸ್ಟ್‌ ಯುನಿವರ್ಸಿಟಿ ಬೆಂಗಳೂರಿನಲ್ಲಿ ಎಂಎಸ್ಸಿ ಪದವಿ ಪಡೆದಿರುತ್ತಾರೆ.





























































































































































































































error: Content is protected !!
Scroll to Top