ಕಾರ್ಕಳ : ಉಡುಪಿ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಉಡುಪಿ, ಹಾಸನ, ಸೇರಿದಂತೆ ಇತರ 10 ಜಿಲ್ಲೆಗಳಲ್ಲಿ ಒಟ್ಟು 355 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಅಕ್ಟೋಬರ್ 25, 2021ರಂದು ಅಧಿಸೂಚನೆ ಹೊರಡಿಸಿದ್ದು 10 ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ನೇರ ನೇಮಕಾತಿಯ ಆದೇಶವನ್ನು ಕಳುಹಿಸಿದೆ.
ಆಸಕ್ತ ಅಭ್ಯರ್ಥಿಗಳು ಪಿಯುಸಿ ಅಥವಾ ಪದವಿ ಶಿಕ್ಷಣ ಹೊಂದಿರಬೇಕು. ವಯೋಮಿತಿ ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ. ಮೀಸಲಾತಿಯಂತೆ ನಿಯಮಾನುಸಾರ ವಯೋಮಿತಿಯಲ್ಲಿ ಸೂಕ್ತ ರಿಯಾಯಿತಿ ಇರುತ್ತದೆ. ಈ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಸೇರಿದಂತೆ 10 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಸರಕಾರದಿಂದ ಅಧಿಸೂಚನೆ
LEAVE A REPLY
Recent Comments
ಕಗ್ಗದ ಸಂದೇಶ
on
Good
Good