Saturday, December 4, 2021
spot_img
Homeರಾಜ್ಯರಾಜ್ಯದ 114 ಅತ್ಯಂತ ಹಿಂದುಳಿದ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಕಾನ್ಸಂಟ್ರೇಟರ್ ಪೂರೈಕೆ: ಸಿಎಂ ಯಡಿಯೂರಪ್ಪ

ರಾಜ್ಯದ 114 ಅತ್ಯಂತ ಹಿಂದುಳಿದ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಕಾನ್ಸಂಟ್ರೇಟರ್ ಪೂರೈಕೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದ 114 ಅತ್ಯಂತ ಹಿಂದುಳಿದ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ 791 ಆಮ್ಲಜನಕ ಕಾನ್ಸಂಟ್ರೇಟರ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹೇಳಿದ್ದಾರೆ.

ರಾಜ್ಯದ 114 ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ವಿತರಿಸುವ ಗಿವ್‌ಇಂಡಿಯಾ ಫೌಂಡೇಶನ್‌ನ ಕಾರ್ಯಕ್ಕೆ ಚಾಲನೆ ನೀಡುವಾಗ  ಮುಖ್ಯಮಂತ್ರಿ, “ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, 114 ಅತ್ಯಂತ ಹಿಂದುಳಿದ ತಾಲ್ಲೂಕುಗಳು 791 ಆಮ್ಲಜನಕ ಕಾನ್ಸಂಟ್ರೇಟರ್ ಪಡೆಯಲಿದೆ.ಇದರಲ್ಲಿ ಪ್ರತಿ 10 ಲೀಟರ್ ಸಾಮರ್ಥ್ಯದ 556 ಮತ್ತು ಪ್ರತಿ 5 ಲೀಟರ್ ಸಾಮರ್ಥ್ಯದ 226 ಕಾನ್ಸಂಟ್ರೇಟರ್ ಗಳು ಸೇರಿದೆ.” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ. ಸಿ.ಎನ್, ಅಶ್ಬತ್ಥ ನಾರಾಯಣ  , “2021 ರ ಜೂನ್ 26 ರಂದು ಪ್ರಾರಂಭವಾದ ‘ಆಕಾಂಕ್ಷಾ’ ಸಿಎಸ್ಆರ್ ಪೋರ್ಟಲ್ ಮೂಲಕ ಆರೋಗ್ಯಕ್ಕೆ ಅಗತ್ಯವಿರುವ 229 ಕೋಟಿ ರೂ.ಗಳ ವಿವಿಧ ವೈದ್ಯಕೀಯ ಉಪಕರಣಗಳು ಇಲಾಖೆಯಿಂದ  ಒದಗಿಸಲಾಗಿದೆ ಮತ್ತು 136 ದಾನಿಗಳು ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ ಮತ್ತು ಇದುವರೆಗೆ 21 ವಿಭಾಗಗಳಲ್ಲಿ ಗುರಿಗಳನ್ನು ಸಾಧಿಸಲಾಗಿದೆ ಮತ್ತು 71 ಪ್ರಗತಿಯಲ್ಲಿದೆ ಮತ್ತು ವಿವರಗಳನ್ನು http://www.akanksha.karnataka.gov.in ನಲ್ಲಿ ನೋಡಬಹುದು” ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ಸರಕಾರದ ಹೋರಾಟಕ್ಕೆ ಕೈಜೋಡಿಸುವ ಪ್ರತಿಷ್ಠಾನದ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಉಒಅಮುಖ್ಯಮಂತ್ರಿ  ಇದುವರೆಗೆ ಪ್ರತಿಷ್ಠಾನವು 47 ಕೋಟಿ ರೂ.ಗಳ ಮೌಲ್ಯದ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ದಾನ ಮಾಡಿದೆ. ಎಂದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!