ಕೇರಳ: ಕಾರು – ಲಾರಿ ಮುಖಾಮುಖಿ ಡಿಕ್ಕಿ, ಕಾರಿನಲ್ಲಿದ್ದ ಐದು ಯುವಕರು ಸಾವು

ತಿರುವನಂತಪುರಂ: ಕೇರಳದ ತಿರುವನಂತಪುರಂ ಜಿಲ್ಲೆಯ ಕಲ್ಲಂಬಲಂ ಪೊಲೀಸ್ ಠಾಣೆ ವ್ಯಾಪ್ತಿಯ ತೋಟ್ಟಕ್ಕಾಡು ಬಳಿ ಮಂಗಳವಾರ ರಾತ್ರಿ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಕೊಲ್ಲಂನ ಐದು ಯುವಕರು ಮೃತಪಟ್ಟಿದ್ದಾರೆ.

ಮೃತ ಯುವಕರನ್ನು ಚಿರಕ್ಕರದ ಸುಧೀಶ್ ಎಸ್(25), ಅರುಣ್ (30); ಆರ್ ರಾಜೀವ್ (33), ವಿಷ್ಣು (29), ಸೂರ್ಯ ಹಾಗೂ ಉದಯಕುಮಾರ್(28)  ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಕಲ್ಲಂಬಲಂ ಪೊಲೀಸರು ತಿಳಿಸಿದ್ದಾರೆ. 

ಕಾರು ತಿರುವನಂತಪುರಂ ಕಡೆಗೆ ಸಾಗುತ್ತಿದ್ದರೆ, ತಮಿಳುನಾಡು ನೋಂದಣಿ ಹೊಂದಿರುವ ಲಾರಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.























































































































error: Content is protected !!
Scroll to Top