ಜ. 22ರಿಂದ 24 : ಸಾಣೂರು ಯುವಕ ಮಂಡಲ ವಾರ್ಷಿಕೋತ್ಸವ

ಕಾರ್ಕಳ : ರಾಜ್ಯ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಸಾಣೂರು ಯುವಕ ಮಂಡಲದ ಅಂಗ ಸಂಸ್ಥೆ ಶ್ರೀವಾಣಿ ಯಕ್ಷಗಾನ ಸಭಾ ಇದರ ಸುವರ್ಣ ಮಹೋತ್ಸವ ಸಂಭ್ರಮ ಜ. 22ರಂದು ಉದ್ಘಾಟನೆಗೊಳ್ಳಲಿದೆ ಎಂದು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಹೇಳಿದರು.
ಮಂಗಳವಾರ ಹೊಟೇಲ್‌ ಪ್ರಕಾಶ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ಸುವರ್ಣ ಮಹೋತ್ಸವದ ಜೊತೆಗೆ ಯುವಕ ಮಂಡಲದ 67ನೇ ವಾರ್ಷಿಕೋತ್ಸವ ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, 23ರಂದು ಸಭಾಕಾರ್ಯಕ್ರಮ, 24ರಂದು ಸಂಜೆ ಸಾರ್ವಜನಿಕ ಅನ್ನ ಸಂತಸಂರ್ಪಣೆ ನಡೆಯಲಿದೆ ಎಂದರು.
22ರಂದು ಬೆಳಿಗ್ಗೆ 8ಕ್ಕೆ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಧ್ವಜಾರೋಹಣಗೈಯಲಿದ್ದು ಮುಂಬೈಯ ಉದ್ಯಮಿ ಮನೋಹರ ಕಾಮತ್ ಮಹೋತ್ಸವಕ್ಕೆ ಚಾಲನೆ ನೀಡಲಿರುವರು. ಅಂದು ರಾತ್ರಿ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸುವರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗ್ಡೆ, ವೇದಮೂರ್ತಿ ಶ್ರೀರಾಮ್‌ ಭಟ್‌, ಕಿಶನ್‌ ಹೆಗ್ಡೆ ಪಳ್ಳಿ, ಸುರೇಶ್‌ ಶೆಟ್ಟಿ ಗುರ್ಮೆ, ಮುನಿಯಾಲು ಉದಯ ಶೆಟ್ಟಿ, ರಮೇಶ್‌ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ, ನವನೀತ್‌ ಶೆಟ್ಟಿ ಕದ್ರಿ, ಶ್ರೀಮತಿ ಎಸ್‌. ರೈ, ಸಿ.ಎ. ಸುರೇಂದ್ರ ಶೆಟ್ಟಿ, ಶ್ಯಾಮ ಶೆಟ್ಟಿ ಸಾಣೂರು ಉಪಸ್ಥಿತರಿವರು.

ಬಲೆ ತೆಲಿಪಾಲೆ
ಸಂಜೆ 6.30ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ʼಬಲೆ ತೆಲೆಪಾಲೆ’ ತುಳು ನಾಟಕ ಹಾಗೂ ಶ್ರೀವಾಣಿ ಯಕ್ಷಗಾನ ಸಭಾದ ಆಶ್ರಯದಲ್ಲಿ `ಜಾಂಬವತಿ ಕಲ್ಯಾಣ ‘ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

23ರಂದು ಸಂಜೆ 8 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ. ಜಗದೀಶ್‌ ಉದ್ಘಾಟಿಸುವರು. ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್‍ಫ್ರೆಡ್ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಯಶ್‌ ಪಾಲ್‌ ಸುವರ್ಣ, ಭವ್ಯರಾಣಿ ಅನಂತಾಡಿ, ಅಶೋಕ್‌ ಕುಮಾರ್‌ ಬಳ್ಳಾಲ್‌, ವಿಷ್ಣುಮೂರ್ತಿ, ಅರುಣ್‌ ಕುಮಾರ್‌, ಸಾಣೂರು ನರಸಿಂಹ ಕಾಮತ್‌, ಆರ್.‌ ದೇವರಾಯ ಪ್ರಭು, ಬೇಬಿ ಸುಂದರ ಪೂಜಾರಿ ಉಪಸ್ಥಿತರಿರುವರು.


ಸಂಜೆ : 6:30ರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ' ಕಾಮಿಡಿ ಶೋ ನಡೆಯಲಿದೆ. ಮಂಡಲದ ಸದಸ್ಯರಿಂದಏರ್ ತಾಂಕುವೆರ್’ ನಾಟಕ ಪ್ರದರ್ಶನಗೊಳ್ಳಲಿದೆ.

ಯಕ್ಷಗಾನ ಬಯಲಾಟ

24ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ `ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಶೆಟ್ಟಿ, ರಾಜೇಶ್, ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಪ್ರಕಾಶ್ ಮಡಿವಾಳ, ಚಂದ್ರಹಾಸ್ ಪೂಜಾರಿ, ಪ್ರಮಿತ್ ಸುವರ್ಣ, ರಾಜೇಶ್ ಪೂಜಾರಿ, ಗಣೇಶ್ ನಾಯಕ್‌ ಸಾಣೂರು, ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.























































































































error: Content is protected !!
Scroll to Top