ಬೆಂಗಳೂರು, ನ.29 :ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ ಹಾಗೂ ಯಾವಾಗ ಪ್ರಾರಂಭವಾಗಬಹುದು ಎಂಬುದು ಕೂಡ ಗೊತ್ತಿಲ್ಲ. ಆದರೆ ಪರೀಕ್ಷಾ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿ ಸಿದ್ಧಗೊಳಿಸುವಂತೆ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಿದೆ. ಈ ಕುರಿತಂತೆ ಶಿಕ್ಷಣ ಸಚಿವರು ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆಯಲಿದ್ದು, ಅದರಲ್ಲಿ ವೇಳಾಪಟ್ಟಿಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಒಂದೆಡೆ ಆನ್ ಲೈನ್ ಕ್ಲಾಸ್ ಗಳ ಬಗ್ಗೆ ವ್ಯಾಪಕವಾಗಿ ದೂರುಗಳು ಬರುತ್ತಿವೆ. ಇನ್ನೊಂದೆಡೆ ಶಾಲೆಗಳ ಪ್ರಾರಂಭವೇ ಅನಿಶ್ಚಿತತೆಯಲ್ಲಿದೆ. ಈ ನಡುವೆ ಶಿಕ್ಷಣ ಇಲಾಖೆ ಪರೀಕ್ಷೆಯ ವೇಳಾಪಟ್ಟಿ ರಚಿಸಲು ಹೇಳಿರುವುದು ಗೊಂದಲಕ್ಕೀಡುಮಾಡಿದೆ. ಇಲಾಖೆಯ ಸೂಚನೆ ಪ್ರಕಾರ ಡಿಸೆಂಬರ್ ಮೂರನೇ ವಾರದಲ್ಲಿ ವೇಳಾಪಟ್ಟಿ ಪ್ರಕಟವಾಗಬೇಕು. ಆದರೆ ಪರೀಕ್ಷಾ ಮಂಡಳಿ ಅಧಿಕಾರಿಗಳು ಯಾವ ರೀತಿ ವೇಳಾಪಟ್ಟಿ ರಚಿಸುವುದು ಎಂಬ ಗೊಂದಲದಲ್ಲಿದ್ದಾರೆ.
ಡಿಸೆಂಬರ್ ಅಂತ್ಯಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ?








































