
ಮಂಗಳೂರು,ಆ. 14:ಎಕ್ಕೂರು ಬಾಬಾ ಎಂದೇ ಅರಿಯಲ್ಪುಡುತ್ತಿದ್ದ ಮಾಜಿ ಡಾನ್ ಶುಭಕರ ಶೆಟ್ಟಿ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಎಕ್ಕೂರು ಬಾಬಾ ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲ ನೀಡದೆ ತೀರಿಕೊಂಡಿದ್ದಾರೆ. ಜ್ವರದ ಪರೀಕ್ಷೆ ಮಾಡಿಸಲು ಹೋದಾಗ ಅವರಿಗೆ ಕೊರೊನಾ ಇರುವುದು ದೃಢವಾಗಿತ್ತು. ವಾರದ ಹಿಂದೆಯಷ್ಟೇ ಅವರ ತಾಯಿ ತೀರಿಕೊಂಡಿದ್ದರು.
ಎಕ್ಕೂರು ಬಾಬಾ ಭೂಗತ ಚಟುವಟಿಕೆಗಳಿಗೆ ವಿದಾಯ ಹೇಳಿದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಬಲಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.